ಲಾಕ್ ಡೌನ್ ಎಫೆಕ್ಟ್: 280 ಕೋಟಿ ರೂ. ಮೊತ್ತದ ಪಿಎಫ್ ಹಣ ವಿತ್‏ಡ್ರಾ! 
ದೇಶ

ಲಾಕ್ ಡೌನ್ ಎಫೆಕ್ಟ್: 280 ಕೋಟಿ ರೂ. ಮೊತ್ತದ ಪಿಎಫ್ ಹಣ ವಿತ್‏ಡ್ರಾ!

ಲಾಕ್ ಡೌನ್ ಪರಿಣಾಮ, 280 ಕೋಟಿ ರೂಪಾಯಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲಾಗಿದೆ ಎಂದು  ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ತಿಳಿಸಿದೆ. 

ನವದೆಹಲಿ: ಲಾಕ್ ಡೌನ್ ಪರಿಣಾಮ, 280 ಕೋಟಿ ರೂಪಾಯಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡಲಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ತಿಳಿಸಿದೆ. 

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಪಿಎಫ್ ಚಂದಾದಾರರಿಗೆ ಸಹಾಯವಾಗುವಂತೆ ಮಾಡಲು ಇಪಿಎಫ್ ಯೋಜನೆಗೆ ತಿದ್ದುಪಡಿ ತರಲಾಗಿದ್ದು ದೇಶಾದ್ಯಂತ ಪಿಎಫ್ ವಿತ್ ಡ್ರಾ ಮಾಡುವುದಕ್ಕೆ 1.37 ಲಕ್ಷ ಅರ್ಜಿಗಳು ಬಂದಿದ್ದವು. ಒಟ್ಟಾರೆ 280 ಕೋಟಿ ರೂಪಾಯಿ ಮೊತ್ತದ ಪಿಎಫ್ ಹಣ ವಿತ್  ಡ್ರಾ ಮಾಡಲಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.  

ವಿತ್ ಡ್ರಾ ಮಾಡಲಾಗಿರುವ ಹಣವನ್ನು ಈಗಾಗಲೇ ಜಮೆ ಮಾಡುವ ಕೆಲಸ ಪ್ರಾರಂಭವಾಗಿದೆ, ಬೇರೆ ವಿಭಾಗಗಳಲ್ಲಿ ಹಣ ಹಿಂತೆಗೆತಕ್ಕೆ ಅರ್ಜಿ ನೀಡಿರುವವರೂ ಸಹ ಕೋವಿಡ್-19 ವಿರುದ್ಧದ ಹೋರಾಟಕ್ಕಾಗಿ ಹಣ ಹಿಂತೆಗೆಯಬಹುದಾಗಿದೆ ಎಂದು ಸಚಿವಾಲಯ ತಿಳಿಸಿದೆ. 

ಇಪಿಎಫ್ ಯೋಜನೆಯಿಂದ ಹಣ ಹಿಂತೆಗೆದುಕೊಳ್ಳುವುದಕ್ಕೆ ವಿಶೇಷ ಅವಕಾಶ ಕಲ್ಪಿಸಿರುವುದು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಭಾಗವಾಗಿದೆ.

ಮೂರು ತಿಂಗಳ ಬೇಸಿಕ್ ವೇತನ ಹಾಗೂ ತುಟ್ಟಿ ಭತ್ಯಗಳ ವ್ಯಾಪ್ತಿಯಲ್ಲಿ ಬರುವ ನಾನ್ ರಿಫಂಡಬಲ್ ವಿತ್ ಡ್ರಾಯಲ್ ಅಥವಾ ಇಪಿಎಫ್ ಖಾತೆಯಲ್ಲಿ ಸದಸ್ಯರ ಕ್ರೆಡಿಟ್ ನಲ್ಲಿ ಲಭ್ಯವಿರುವ ಶೇ.75 ರಷ್ಟು ಮೊತ್ತ ಈ ಎರಡರಲ್ಲಿ ಯಾವುದು ಕಡಿಮೆಯಿದೆಯೋ ಅದನ್ನು ನೀಡಲಾಗುವುದು, ಇದಕ್ಕಿಂತಲೂ ಕಡಿಮೆ ಮೊತ್ತವನ್ನೂ ಸದಸ್ಯರು ಹಿಂತೆಗೆದುಕೊಳ್ಳಬಹುದು, ಇದು ಮುಂಗಡ ಹಣವಾದ್ದರಿಂದ ಇದಕ್ಕೆ ಆದಾಯ ತೆರಿಗೆ ಕಡಿತಗಳು ಇರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT