ದೇಶ

ಬಡವರಿಗೆ ಹಣ ನೀಡಿ ಅವರನ್ನು ಸಂಕಷ್ಟದಿಂದ ಪಾರುಮಾಡಿ: ಸರ್ಕಾರಕ್ಕೆ ಪಿ ಚಿದಂಬರಂ ಸಲಹೆ

Sumana Upadhyaya

ನವದೆಹಲಿ:21 ದಿನಗಳ ಲಾಕ್ ಡೌನ್ ಬರುವ ಮಂಗಳವಾರ ಕೊನೆಗೊಳ್ಳುತ್ತಿರುವುದರಿಂದ ಅದಕ್ಕೆ ಮುನ್ನ ಪ್ರಧಾನಿ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ವಿಡಿಯೊ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ.

ಈ  ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ, ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ ನಗದು ಮೊತ್ತ ಪರಿಹಾರ ನೀಡಲು ಪ್ರಧಾನಿಯವರನ್ನು ಒತ್ತಾಯಿಸುವಂತೆ ಕಾಂಗ್ರೆಸ್ ಮತ್ತು ಅದರ ಮಿತ್ರರಾಷ್ಟ್ರಗಳು ಅಧಿಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕೋರಿದ್ದಾರೆ.

ಬಡ ಕುಟುಂಬಗಳು ಕೆಲಸಗಳಿಲ್ಲದೆ ಬೀದಿ ಪಾಲಾಗುತ್ತಿವೆ. ಅವರ ಬಳಿ ಉಳಿತಾಯ ಹಣವಿರುವುದಿಲ್ಲ. ಉಚಿತ ಆಹಾರ ಪಡೆಯಲು ಸರದಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಬಡವರಿಗೆ ಹಣ ನೀಡಿ ಅವರ ಜೀವನಕ್ಕೆ ವ್ಯವಸ್ಥೆ ಮಾಡಲು ಸರ್ಕಾರಕ್ಕೆ 65 ಸಾವಿರ ಕೋಟಿ ವೆಚ್ಚವಾಗಬಹುದು, ಅದು ಕಷ್ಟವಾಗುವುದಿಲ್ಲ ಎಂದಿದ್ದಾರೆ.

SCROLL FOR NEXT