ದೇಶ

ಭಾರತದಲ್ಲಿ 20 ಕೋಟಿ 'ಹೈಡ್ರಾಕ್ಸಿಕ್ಲೋರೋಕ್ವಿನ್' ಮಾತ್ರೆಗಳ ಉತ್ಪಾದನೆ!

Nagaraja AB

ನವದೆಹಲಿ: ದೇಶದಲ್ಲಿ ಕೊರೋನಾವೈರಸ್ ರುದ್ರ ತಾಂಡವವಾಡುತ್ತಿರುವಂತೆ ಮಲೇರಿಯಾ ನಿಯಂತ್ರಕ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಉತ್ಪಾದನೆಯಲ್ಲೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ

ಈ ತಿಂಗಳಲ್ಲಿಯೇ 20 ಕೋಟಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಔಷಧಿ ಉತ್ಪನ್ನ ಉದ್ಯಮಗಳು ಉತ್ಪಾದಿಸಿರುವುದಾಗಿ ಅಹಮದಾಬಾದಿನ ಜಿಡಾಸ್ ಕ್ಯಾಡಿಲಾ ಔಷದೋತ್ಪನ ಕಂಪನಿ ಸಿಇಒ ಪಂಕಜ್ ಪಟೇಲ್ ತಿಳಿಸಿದ್ದಾರೆ.

ಕೊರೋನಾವೈರಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಈ ಮಾತ್ರೆಗಳಿಗೆ ಜಗತ್ತಿನಾದ್ಯಂತ ತೀವ್ರ ಬೇಡಿಕೆ ಉಂಟಾಗಿದೆ. ಮಾರಕ ವೈರಸ್ ವಿರುದ್ಧದ ಹೋರಾಟಕ್ಕೆ ಮಿತ್ರರಿಗೆ ನೆರವು ಭಾರತ ಸಿದ್ಧವಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ವಿಶ್ವದಲ್ಲಿಯೇ ಅತಿ ಹೆಚ್ಚಿನ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಭಾರತ ಉತ್ಪಾದಿಸುತ್ತದೆ. ಆದರೆ, ದೇಶದಲ್ಲಿ ಸೋಂಕು ಸಂಬಂಧಿತ ಪ್ರಕರಣಗಳು ಶೀಘ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಔಷಧಿಗಳ ರಫ್ತುನ್ನು ವಿದೇಶಿ ವ್ಯಾಪಾರದ ಮಹಾನಿರ್ದೇಶಕರು ನಿರ್ಬಂಧಿಸಿದ್ದರು.

SCROLL FOR NEXT