ಸಂಗ್ರಹ ಚಿತ್ರ 
ದೇಶ

ಕೊರೋನಾ: ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದ ಸೋಂಕಿತನಲ್ಲಿ ಮತ್ತೆ ವೈರಸ್ ಪಾಸಿಟಿವ್!

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಕೊರೋನಾ ಪೀಡಿತ ವ್ಯಕ್ತಿಯಲ್ಲಿ ಮತ್ತೆ ವೈರಸ್ ದೃಢಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಹೈದರಾಬಾದ್: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದ ಕೊರೋನಾ ಪೀಡಿತ ವ್ಯಕ್ತಿಯಲ್ಲಿ ಮತ್ತೆ ವೈರಸ್ ದೃಢಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಮಾರ್ಚ್ 23 ರಂದು ಈ ವ್ಯಕ್ತಿಯಲ್ಲಿ ವೈರಸ್ ಕಾಣಿಸಿಕೊಂಡಿತ್ತು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ವೈರಸ್ ನೆಗೆಟಿವ್ ಬಂದಿತ್ತು. ಆದರೆ, ಇದೀಗ ಎರಡನೇ ಪರೀಕ್ಷೆಯಲ್ಲಿ ವೈರಸ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆ ಸಿಬ್ಬಂದಿಗಳು ಮತ್ತೆ ವ್ಯಕ್ತಿಯನ್ನು ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾರೆ. ಇದೀಗ ಮತ್ತೆ ವ್ಯಕ್ತಿಯನ್ನು ಪರೀಕ್ಷೆಗೊಳಪಡಿಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗುರುವಾರವಷ್ಟೇ ವ್ಯಕ್ತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಗಿತ್ತು. ಶುಕ್ರವಾರ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತ ವ್ಯಕ್ತಿ ಎಲ್ಲಿಯೂ ಹೋಗಿರಲಿಲ್ಲ. ಇದೀಗ ಆತನೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗಿದೆ. ತನಿಖೆ ಮುಂದುವರೆದಿದ್ದು, ಪರೀಕ್ಷಾ ವರದಿಗಳನ್ನು ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯಾವುದೇ ಕ್ಷಣದಲ್ಲಿ ಅಮೆರಿಕದಿಂದ ವೈಮಾನಿಕ ದಾಳಿ ಸಾಧ್ಯತೆ: ಇರಾನ್ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ಸೂಚನೆ

Ranji Trophy final: ಚೊಚ್ಚಲ ಬಾರಿ ಫೈನಲ್‌ಗೆ ಕಾಲಿಟ್ಟಿರುವ ಕಾಶ್ಮೀರ ಬಲಿಷ್ಠ ಕರ್ನಾಟಕದ ವಿರುದ್ಧ ಗೆಲ್ಲಲು ಪವಾಡವೇ ಮಾಡಬೇಕಿದೆ!

ಬಾಂಗ್ಲಾದೇಶ ಮುಳುಗಿಸುವ ಯೋಜನೆ, ಅಸ್ಥಿರತೆ ಸೃಷ್ಟಿಗೆ ಯತ್ನಿಸಿದ್ದ ನೊಬೆಲ್ ಯೂನಸ್: ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ ಬಹಿರಂಗ!

2026ರಲ್ಲಿ ಭಾರತದ ವೇತನ ಹೆಚ್ಚಳ ಶೇ.9.1ಕ್ಕೆ ಏರಿಕೆ ಸಾಧ್ಯತೆ: ವರದಿ

ಸ್ಟಾಲಿನ್ ನಿಜವಾದ ಸ್ನೇಹಿತರು ಭ್ರಷ್ಟರು: ಡಿಎಂಕೆ ವಿರುದ್ಧ ನಟ ವಿಜಯ್ ವಾಗ್ದಾಳಿ

SCROLL FOR NEXT