ದೇಶ

ಕೊರೋನಾ ವೈರಸ್, ಲಾಕ್ ಡೌನ್ ನಡುವೆ ಜನಿಸಿದ ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ

Srinivas Rao BV

ಸಹರನ್ಪುರ: ಕೊರೋನಾ ವೈರಸ್, ಲಾಕ್ ಡೌನ್ ನಡುವೆಯೇ ಜನಿಸಿದ ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡಲಾಗಿದೆ. 

ಉತ್ತರ ಪ್ರದೇಶದ ಸಹರನ್ಪುರ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು,ವಿಜಯ್ ವಿಹಾರದ ನಿವಾಸಿಯಾಗಿರುವ ಓಂ ವೀರ್ ಸಿಂಗ್ ತನ್ನ ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡಿವುದಾಗಿ ಹೇಳಿದ್ದಾರೆ. ಕೊರೋನಾ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುವ ಕಾರಣ ತನ್ನ ಮಗುವಿಗೆ ಸ್ಯಾನಿಟೈಸರ್ ಎಂಬ ಹೆಸರು ನಾಮಕರಣ ಮಾಡಿದ್ದೇನೆ ಎನ್ನುತ್ತಾರೆ ಓಂ ವೀರ್ ಸಿಂಗ್  

ಕೊರೋನಾ ಬಗ್ಗೆ ಮಾತನಾಡಿದಾಗಲೆಲ್ಲಾ ಜನರು ಸ್ಯಾನಿಟೈಸರ್ ಬಗ್ಗೆ ಮಾತನಾಡುತ್ತಾರೆ. ಭಾನುವಾರ ಈ ಮಗು ಜನಿಸಿದ್ದು, ಪೋಷಕರು ಮಗುವಿಗೆ ಸ್ಯಾನಿಟೈಸರ್ ಎಂದು ನಾಮಕರಣ ಮಾಡುವುದಾಗಿ ಘೋಷಿಸಿದಾಗ ಆಸ್ಪತ್ರೆಯಲ್ಲಿದ್ದ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ನಗಲು ಪ್ರಾರಂಭಿಸಿದ್ದರಂತೆ. 

ಗೋರಖ್ ಪುರದಲ್ಲಿಯೂ ಇಂಥಹದ್ದೇ ಘಟನೆ ನಡೆದಿದ್ದು, ಜನತಾ ಕರ್ಫ್ಯೂ ದಿನ ಜನಿಸಿದ್ದ ಮಗುವಿಗೆ ಕೊರೋನಾ ಎಂದೇ ಕಾಮಕರಣ ಮಾಡಲಾಗಿತ್ತು, ಇದಾದ ಒಂದು ವಾರದಲ್ಲಿ ಜನಿಸಿದ್ದ ಮಗುವೊಂದಕ್ಕೆ ಲಾಕ್ ಡೌನ್ ಎಂದು ನಾಮಕರಣ ಮಾಡಲಾಗಿದ್ದರೆ, ರಾಮ್ ಪುರದಲ್ಲಿ ಜನಿಸಿದ್ದ ಮಗುವೊಂದಕ್ಕೆ ಕೋವಿಡ್ ಎಂದೇ ಹೆಸರಿಟ್ಟಿದ್ದಾರೆ.

SCROLL FOR NEXT