ದೇಶ

ದೆಹಲಿಯಲ್ಲಿ ಮತ್ತೆ ಭೂಕಂಪನ, ಆವರಿಸಿದ ಭೀತಿ

Lingaraj Badiger

ನವದೆಹಲಿ: ಕೊರೋನಾ ಸಂಕಷ್ಟ ದೆಹಲಿಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ ಮತ್ತೊಂದು ಕಡೆ, ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಲಘು ಭೂಕಂಪನ ಸಂಭವಿಸಿದ್ದು, ಜನತೆಯಲ್ಲಿ ಭೀತಿಯ ವಾತವರಣ ನಿರ್ಮಾಣವಾಗಿದೆ.

ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.7ರಷ್ಟು ಎಂದು ದಾಖಲಾಗಿದೆ. ಕಂಪನದ ಕೇಂದ್ರ ಬಿಂದು ತುಂಬಾ ಆಳದಲ್ಲಿ ಇರಲಿಲ್ಲ ಎನ್ನಲಾಗಿದೆ.

ಭಾನುವಾರ ಕೂಡ ದೆಹಲಿಯಲ್ಲಿ 3.5 ತೀವ್ರತೆಯ ಲಘು ಭೂಕಂಪ ಸಂಭವಿಸಿತ್ತು. ಹಾಗಾಗಿ, ಭಾನುವಾರದ ಲಘು ಭೂಕಂಪನದ ಸಂದರ್ಭದಲ್ಲಿ ನಡುಕ ಉಂಟಾಗಿತ್ತು ಎಂದು ಭೂಕಂಪಶಾಸ್ತ್ರ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ 2018ರ ಏಪ್ರಿಲ್ 24ರಂದು ಇಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು. 

SCROLL FOR NEXT