ದೇಶ

ಆಂಧ್ರಪ್ರದೇಶದಲ್ಲಿ ಮೊದಲ ಸಾವಯವ ಸೋಂಕು ನಿವಾರಕ ಸುರಂಗ!

Nagaraja AB

ಅನಂತಪುರ: ಆಂಧ್ರಪ್ರದೇಶದ  ಅನಂತಪುರ ಜಿಲ್ಲೆಯಲ್ಲಿ  ಮೊದಲ ಬಾರಿಗೆ ಸಾವಯವ ಸೋಂಕು ನಿವಾರಕ ಸುರಂಗ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ.

ಕರ್ನಾಟಕದಲ್ಲಿ ಸುಗರಾಧಾನಾ ಯೋಜನೆ ನಡೆಸುತ್ತಿರುವ ಡಾ. ಕಾರ್ತಿಕ್ ನಾರಾಯಣ್ ಅವರ ಬೆಂಬಲದೊಂದಿಗೆ ಪೆಣುಕೊಂಡದ ಸಬ್ ಕಲೆಕ್ಟರ್ ಈ ಸೋಂಕು ನಿವಾರಕ ನಿರ್ಮಾಣಕ್ಕೆ ಗಮನ ಹರಿಸಿದ್ದಾರೆ. 

ಹಿಂದೂಪುರದಲ್ಲಿಯೂ ಇಂತಹ ಮೂರು ಸೋಂಕು ನಿವಾರಕ ಸುರಂಗಗಳನ್ನು ನಿರ್ಮಿಸಲಾಗಿದೆ. ಈ ಸುರಂಗಗಳಲ್ಲಿ ಮಾರ್ಗದಲ್ಲಿ 
ಸೋಡಿಯಂ ಹೈಪೋಕ್ಲೋರೈಟ್ ಬದಲಿಗೆ, ಸಿಟ್ರೊಬಿಯೊಶೀಲ್ಡ್ ದ್ರಾವಣವನ್ನು ಬಳಸಲಾಗುತ್ತದೆ. 

ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ  ಧೂಮಪಾನ ಸಂಬಂಧಿತ ರೋಗಿಗಳಿಗೆ ಪರಿಹಾರ ನೀಡುವಲ್ಲಿ ಈ ದ್ರಾವಣವನ್ನು ಬಳಸಲಾಗುತಿತ್ತು.  ಇದನ್ನು ಜನರ ಮೇಲೆ ಸಿಂಪಡಿಸಿದರೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ತಿಳಿದುಬಂದಿದೆ. 

ಸೋಡಿಯಂ ಹೈಪೋಕ್ಲೊರೈಟ್ ಬಳಕೆಯಿಂದ ಮೂಗಿನ ಸಮಸ್ಯೆ, ಗಂಟಲು ನೋವು, ಕೆಮ್ಮು, ಮತ್ತಿತರ ಸಮಸ್ಯೆಗಳು ಉಂಟಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ನೀಡಿದೆ. 

SCROLL FOR NEXT