ದೇಶ

ಅಗತ್ಯ ವಸ್ತುಗಳು ಸಾಕಷ್ಟಿವೆ, ಚಿಂತೆ ಪಡುವ ಅಗತ್ಯವಿಲ್ಲ: ಕೇಂದ್ರ ಗೃಹ ಸಚಿವಾಲಯ

Manjula VN

ನವದೆಹಲಿ; ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಈ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿವೆ ಎಂಬುದನ್ನು ದೇಶದ ಗೃಹ ಸಚಿವನಾಗಿ ಜನತೆಗೆ ಭರವಸೆ ನೀಡುತ್ತಿದ್ದಾರೆ. ಈ ಬಗಗೆ ಯಾರೊಬ್ಬರೂ ಚಿಂತೆ ಪಡುವ ಅಗತ್ಯವಿಲ್ಲ. ಅಲ್ಲದೆ, ಶ್ರೀಮತರು ಬಡವರಿಗೆ ಸಹಾಯ ಮಾಡುವಂತೆ ಇದ ವೇಳೆ ಮನವಿ ಮಾಡಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ. 

ಇದೇ ವೇಳೆ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ರಾಜ್ಯ ಸರ್ಕಾರಗಳ ಪರಿಶ್ರಮವನ್ನೂ ಅಮಿತ್ ಶಾ ಶ್ಲಾಘಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸಿ ರಾಜ್ಯ ಸರ್ಕಾರಘಳು ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯವಾದದ್ದು. ಪ್ರಸ್ತುತ ಘೋಷಣೆಯಾಗಿರುವ ಲಾಕ್'ಡೌನ್ ನ್ನು ಪ್ರತೀಯೊಬ್ಬ ಪ್ರಜೆ ಕೂಡ ಪಾಲನೆ ಮಾಡುವಂತೆ ಮಾಡಲು ನಾವು ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಬೇಕಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ವೈರಸ್ ವಿರುದ್ಧ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಸ್ಯಾನಿಟೈಸೇಷನ್ ಸಿಬ್ಬಂದಿ, ಪೊಲೀಸರು ಹಾಗೂ ಎಲ್ಲಾ ಭದ್ರತಾ ಸಿಬ್ಬಂದಿಗಳು ಕೊಡುಗೆ ಮಹತ್ತರವಾದ್ದು ಎಂದು ಹೇಳಿದ್ದಾರೆ. 

ನಿಮ್ಮ ಹೋರಾಟ ಮನ ಮುಟ್ಟಿತ್ತಿದೆ. ನಿಮ್ಮ ಧೈರ್ಯ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿರುವ ರೀತಿ ಪ್ರತೀ ಭಾರತೀಯನನ್ನೂ ಪ್ರೇರಣೆಗೊಳಗಾಗುವಂತೆ ಮಾಡುತ್ತಿದೆ. ವೈದ್ಯರು ನೀಡುತ್ತಿರುವ ಮಾರ್ಗದರ್ಶನವನ್ನು ಅನುಸರಿಸಬೇಕು. ಹಾಗೂ ಅವರಿಗೆ ಸಹಕಾರ ನೀಡಬೇಕೆಂದು ತಿಳಿಸಿದ್ದಾರೆ. 

SCROLL FOR NEXT