ದೇಶ

ಆತಂಕದ ನಡುವೆ ಆಶಾಕಿರಣ: ಈ ರಾಜ್ಯದಲ್ಲಿ 11 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ!

Vishwanath S

ಪಣಜಿ: ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಇಂದು ಎರಡನೇ ಬಾರಿಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಆದರೆ ಈ ನಡುವೆ ಭರವಸೆಯ ಮೊಳಕೆಯೊಂದು ಮೂಡಿದಿದ್ದು ಕಳೆದ 11 ದಿನಗಳಿಂದ ಯಾವುದೇ ಹೊಸ
ಕೊರೋನಾ ಸೋಂಕು ಪತ್ತೆಯಾಗಿಲ್ಲ.

ಗೋವಾದಲ್ಲಿ 11 ದಿನಗಳಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಏಪ್ರಿಲ್ 17ರವರೆಗೆ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗದಿದ್ದರೆ ನಂತರ ಗೋವಾವನ್ನು 'ಹಸಿರು ವಲಯ' ಎಂದು ಘೋಷಿಸಲಾಗುವುದು
ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಅದಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ದಕ್ಷಿಣ ಗೋವೆಯನ್ನು ಹಸಿರು ವಲಯ ಎಂದು ಘೋಷಿಸಿದೆ. ಇನ್ನು ಉತ್ತರ ಗೋವೆಯಲ್ಲಿ ಒಟ್ಟಾರೆ 7 ಪ್ರಕರಣಗಳು ಪತ್ತೆಯಾಗಿದ್ದು ಈ ಪೈಕಿ ಐವರು ಗುಣಮುಖರಾಗಿದ್ದು
ಇನ್ನು ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಏಪ್ರಿಲ್ 4ರಿಂದ ಈ ಭಾಗದಲ್ಲಿ ಒಂದು ಪ್ರಕರಣ ಪತ್ತೆಯಾಗದ ಹಿನ್ನೆಲೆಯಲ್ಲಿ ಗೋವಾ ಕೊರೋನಾ ಮುಕ್ತವಾಗುತ್ತ ಸಾಗಿದೆ. 

ಮಹಾರಾಷ್ಟ್ರದ ಸಿಂಧೂದುರ್ಗ ಜಿಲ್ಲೆಯಲ್ಲಿ ಆರೆಂಜ್ ಝೋನ್ ಎಂದು ಘೋಷಿಸಲಾಗಿದೆ. ಇತ್ತ ಕರ್ನಾಟಕದ ಬೆಳಗಾವಿಯಲ್ಲೂ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗುತ್ತಿದ್ದರು. ಗೋವಾ ಮಾತ್ರ ತನ್ನ ಗಡಿಗಳನ್ನು
ಸಂಪೂರ್ಣವಾಗಿ ಮುಚ್ಚಿದ್ದರಿಂದ ಕೊರೋನಾ ವಿರುದ್ಧ ಹೋರಾಡುವಲ್ಲಿ ಶಕ್ತವಾಗಿದೆ.
 

SCROLL FOR NEXT