ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 
ದೇಶ

ಪ್ರಧಾನಿ ಮೋದಿ ಹೇಳಿದ ಸಪ್ತ ಸೂತ್ರಗಳೇನು?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ 21 ದಿನಗಳ ಲಾಕ್ ಡೌನ್ ಕೊನೆಯ ದಿನ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು.

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ 21 ದಿನಗಳ ಲಾಕ್ ಡೌನ್ ಕೊನೆಯ ದಿನ ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದರು.

ಅವರ ಭಾಷಣದ ಹೈಲೈಟ್ಸ್ ಹೀಗಿದೆ:

- ರಾಜ್ಯಗಳಲ್ಲಿ ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 20ರವರೆಗೆ ತೀವ್ರ ನಿಗಾ, ಕಟ್ಟೆಚ್ಚರ, ನಂತರ ಹಂತ ಹಂತವಾಗಿ ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ವಿನಾಯ್ತಿ.

- ಹಾಟ್ ಸ್ಪಾಟ್ ಸ್ಥಳಗಳ ಮೇಲೆ ಮುಂದಿನ ಒಂದು ವಾರ ತೀವ್ರ ನಿಗಾ.

- ನಾಳೆ ಕೇಂದ್ರ ಸರ್ಕಾರದಿಂದ ವಿಸ್ತೃತ ಮಾರ್ಗಸೂಚಿ ಬಿಡುಗಡೆ. ಬಡವರು, ನಿರ್ಗತಿಕರು ಮತ್ತು ದಿನಗೂಲಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ರಚನೆ.

ಇದೇ ಸಂದರ್ಭದಲ್ಲಿ ದೇಶವಾಸಿಗಳು ಮನೆಯಲ್ಲಿದ್ದುಕೊಂಡು ಪಾಲಿಸಿ ಎಂದು ಸಪ್ತ ಸೂತ್ರಗಳನ್ನು ನೀಡಿದ್ದಾರೆ. ಅವುಗಳು-

  1. ಮನೆಯಲ್ಲಿರುವ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿಯಿರಲಿ. ಅದರಲ್ಲೂ ಅಸೌಖ್ಯದಲ್ಲಿರುವ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ಬೇಕು.
  2. ಸಾಮಾಜಿಕ ಅಂತರದ ಲಕ್ಷ್ಮಣ ರೇಖೆಯನ್ನು ಪಾಲಿಸಿ, ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಸಿ.
  3. ನಿಮ್ಮ ಮನೆ ಸುತ್ತಮುತ್ತ ಇರುವ ಬಡವರು, ನಿರ್ಗತಿಕರ ಬಗ್ಗೆ ಕಾಳಜಿಯಿರಲಿ, ಸಾಧ್ಯವಾದರೆ ಅವರಿಗೆ ಊಟ, ತಿಂಡಿ ನೀಡಿ.
  4. ಆಯುಷ್ ಇಲಾಖೆಯ ಮಾರ್ಗಸೂಚಿ ಪಾಲಿಸಿ, ಬಿಸಿನೀರು ಕುಡಿಯಿರಿ, ಆರೋಗ್ಯ ನೋಡಿಕೊಳ್ಳಿ.
  5. ಮನೆಕೆಲಸದವರು, ಕಾರ್ಮಿಕರ ಮೇಲೆ ದಯೆತೋರಿ, ಈ ಪರಿಸ್ಥಿತಿಯಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಬೇಡಿ.
  6. ಆರೋಗ್ಯ ಸೇತು ಆಪ್ ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಿ. ಬೇರೆಯವರು ಅದನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಹೇಳಿ.
  7. ಕೊರೋನಾ ಸೋಂಕು ವಿರುದ್ಧ, ಸೋಂಕು ಇರುವ ರೋಗಿಗಳ ಆರೋಗ್ಯಕ್ಕೆ ಶ್ರಮಿಸುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಇಲಾಖೆ ಕಾರ್ಯಕರ್ತರು, ಲಾಕ್ ಡೌನ್ ಮಧ್ಯೆ ಹಗಲಿರುಳು ದುಡಿಯುತ್ತಿರುವ ಪೊಲೀಸರ ಮೇಲೆ ಗೌರವ, ಪ್ರೀತಿ ತೋರಿಸಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT