ಸೋನಿಯಾ ಗಾಂಧಿ 
ದೇಶ

ಕೋವಿದ್-19 ವಾರಿಯರ್ಸ್ ಗೆ ಸಲಾಂ: ಲಾಕ್ ಡೌನ್ ನಿಯಮ ಪಾಲಿಸಲು ದೇಶವಾಸಿಗಳಿಗೆ ಸೋನಿಯಾ ಕರೆ

ಕೊರೋನಾ  ಸಾಂಕ್ರಾಮಿಕ  ರೋಗವನ್ನು ಹೊಡೆದೋಡಿಸಲು ತಮ್ಮೆಲ್ಲಾ ಶಕ್ತಿ ಸಾಮಾರ್ಥ್ಯ ಮೀರಿ ಶ್ರಮಿಸುತ್ತಿರುವ ವೈದ್ಯರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ಈ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ವೀಡಿಯೊ ಸಂದೇಶದ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ಲಾಘಿಸಿದ್ದಾರೆ. 

ನವದೆಹಲಿ: ಕೊರೋನಾ  ಸಾಂಕ್ರಾಮಿಕ  ರೋಗವನ್ನು ಹೊಡೆದೋಡಿಸಲು ತಮ್ಮೆಲ್ಲಾ ಶಕ್ತಿ ಸಾಮಾರ್ಥ್ಯ ಮೀರಿ ಶ್ರಮಿಸುತ್ತಿರುವ ವೈದ್ಯರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ಈ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ವೀಡಿಯೊ ಸಂದೇಶದ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ಲಾಘಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಕೆಲವೇ ಗಂಟೆಗಳ ಮೊದಲು, ವಿಡಿಯೋ ಸಂದೇಶ ನೀಡಿದ ಸೋನಿಯಾ ಗಾಂಧಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ  ವೈದ್ಯರು, ಪೊಲೀಸರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ತೋರಿಸಿದ ಹಠಕ್ಕಿಂತ ದೊಡ್ಡ ದೇಶಭಕ್ತಿ ಇಲ್ಲ. ಆರೋಗ್ಯ ಬಿಕ್ಕಟ್ಟನ್ನು ನಾವು ಏಕತೆ, ಶಿಸ್ತು ಮತ್ತು ಆತ್ಮ ವಿಶ್ವಾಸದಿಂದ ಸೋಲಿಸುತ್ತೇವೆ. ತಾಳ್ಮೆ ಮತ್ತು ಪರಿಶ್ರಮಕ್ಕಾಗಿ ದೇಶವಾಸಿಗಳಿಗೆ ಧನ್ಯವಾದಗಳು ಈ ವೇಳೆ ತಿಳಿಸಿದರು.

ಸಂಪನ್ಮೂಲಗಳ ಕೊರತೆಯ ಹೊರತಾಗಿಯೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ 19 ವಿರುದ್ಧ ಹೋರಾಡುತ್ತಿವೆ. ಈ ಯುದ್ಧವನ್ನು ಗೆಲ್ಲಲು ಜನರು ಸರ್ಕಾರಗಳೊಂದಿಗೆ ಸಹಕರಿಸಬೇಕು. ಜನರು ಮನೆಯೊಳಗೆ ಇದ್ದು  ಲಾಕ್ ಡೌನ್ ನಿಯಮ ಪಾಲಿಸಬೇಕು.  ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?