ದೇಶ

ಲಾಕ್ ಡೌನ್-2: ದೇಶಾದ್ಯಂತ ಕೋರ್ಟ್ ಗಳಲ್ಲಿ ತಾಂತ್ರಿಕ ಸಮಸ್ಯೆ

Sumana Upadhyaya

ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಇದೀಗ ಕೋರ್ಟುಗಳ ವ್ಯಾಜ್ಯಗಳ ಮೇಲೆ ಕೂಡ ಪರಿಣಾಮ ಬೀರಿದೆ. ಕಕ್ಷಿದಾರರ ಪರ ವಾದಿಸುವ ವಕೀಲರು, ನ್ಯಾಯಾಧೀಶರು ತಮ್ಮ ಕಕ್ಷಿದಾರರಿಗೆ ಅರಿವು ಮೂಡಿಸುವುದು ಕಷ್ಟವಾಗುತ್ತಿದೆ.

ಅಡ್ವೊಕೇಟ್ ರೋಹನ್ ಶರ್ಮ ಅವರು ತಮ್ಮ ಕಕ್ಷಿದಾರರಿಗೆ ಜಾಮೀನು ಕೊಡಿಸಲು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ದುಂಬಾಲು ಬಿದ್ದಿದ್ದಾರೆ. ಕಕ್ಷಿದಾರ ಅವರ ವಯಸ್ಸಾದ ಪೋಷಕರನ್ನು ನೋಡಿಕೊಳ್ಳಬೇಕಾಗಿದೆ ಎಂದು ಹೇಳಿ ಕೋರ್ಟ್ ನಲ್ಲಿ ಸಂಬಂಧಪಟ್ಟ ರಿಜಿಸ್ಟ್ರರ್ ಗೆ ತುರ್ತು ಅರ್ಜಿ ವಿಚಾರಣೆ ನಡೆಸಿ ಎಂದು ಮನದಟ್ಟು ಮಾಡಬೇಕು, ಇನ್ನೊಂದೆಡೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸುಗಮವಾಗಿ ವಿಚಾರಣೆ ನಡೆಸಬೇಕು,

ಹೀಗೆ ಎರಡೂ ಕೆಲಸಗಳನ್ನು ಒಟ್ಟೊಟ್ಟಿಗೆ ಕುಳಿತಲ್ಲಿಂದಲೇ ವಕೀಲರಿಗೆ ಮಾಡಬೇಕಾಗಿ ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವ ಕಕ್ಷಿದಾರರು ಕಡಿಮೆ. ಅವರಿಗೆ ತಮ್ಮ ವ್ಯಾಜ್ಯ ಬೇಗನೆ ಮುಗಿಯಬೇಕಷ್ಟೆ. ವಕೀಲರಿಗೆ ಹಲವು ತಾಂತ್ರಿಕ ಸಮಸ್ಯೆ.

ಸುಪ್ರೀಂ ಕೋರ್ಟ್ ವಿಡಿಯೊ ಕಾನ್ಫರೆನ್ಸ್ ಮೂಲಕ ಸುಗಮವಾಗಿ ವಿಚಾರಣೆ ನಡೆಸುತ್ತಿದ್ದರೂ ಕೂಡ ಹೈಕೋರ್ಟ್ ಮತ್ತು ಜಿಲ್ಲಾ ಮಟ್ಟದ ನ್ಯಾಯಾಲಯಗಳಿಗೆ ವಿಡಿಯೊ ಕಾನ್ಫರೆನ್ಸ್ ವಿಚಾರಣೆ ವೇಳೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ.

ನಿನ್ನೆ ಸುಪ್ರೀಂ ಕೋರ್ಟ್ ವಿವಿಧ ಪೀಠಗಳ ಮೂಲಕ 50ಕ್ಕೂ ಹೆಚ್ಚು ಕೇಸುಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸಿತು. ಆದರೆ ವಿಚಾರಣಾಧೀನ ಕೆಳ ಹಂತದ ನ್ಯಾಯಾಲಯಗಳಲ್ಲಿ ನೋಡಿದರೆ ವಿಚಾರಣೆಯ ಕೇಸುಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು 15ರಿಂದ 20 ಕೇಸುಗಳ ವಿಚಾರಣೆ ನಡೆಯುತ್ತವೆ.

SCROLL FOR NEXT