ದೇಶ

ಅಮೆರಿಕದಲ್ಲಿ 5 ಕೊರೋನಾ ರೋಗಿಗಳನ್ನು ಯಶಸ್ವಿಯಾಗಿ ಗುಣಪಡಿಸಿದ ಕರ್ನಾಟಕ ಮೂಲದ ವೈದ್ಯ

Srinivas Rao BV

ನವದೆಹಲಿ: "ನನ್ನ ವೈದ್ಯಕೀಯ ಸೇವೆಯಲ್ಲಿ ಯಾವೊಬ್ಬ ಕೋವಿಡ್-19 ರೋಗಿಯೂ ಮೃತಪಟ್ಟಿಲ್ಲ. ಓರ್ವ ರೋಗಿಗೆ ಕ್ಯಾನ್ಸರ್ ಇತ್ತು, ಅವರು ಕ್ಯಾನ್ಸರ್ ನಿಂದ ಮೃತಪಟ್ಟರು" ಇವು ಕರ್ನಾಟದ ಮೂಲದ ಅಮೆರಿಕ ವೈದ್ಯ ಡಾ.ಅರುಣ್ ರಂಗನಾಥ್ ಅವರ ಆತ್ಮವಿಶ್ವಾಸದ ಮಾತುಗಳು 

ಅಮೆರಿಕಾದ ಅಗಸ್ಟಾದಲ್ಲಿರುವ ಮೈನೆ ಜನರಲ್ ಮೆಡಿಕಲ್ ಸೆಂಟರ್ ನ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿರುವ ಅರುಣ್ ರಂಗನಾಥ್, 63-80 ವಯಸ್ಸಿನ ಐವರು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು ಎಲ್ಲರೂ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮತ್ತೋರ್ವ ರೋಗಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.    

ಬ್ರಿಟನ್, ನವದೆಹಲಿಯ ಸಫ್ದರ್ ಜಂಗ್ ಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರುವ ಅಮೆರಿಕಾದಲ್ಲಿ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, 4 ವರ‍್ಷಗಳಿಂದ ಐಸಿಯು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ತುರ್ತು ಚಿಕಿತ್ಸೆ, ಶ್ವಾಸಕೋಶ, ಆಂತರಿಕ ವೈದ್ಯದಲ್ಲಿ ಟ್ರಿಪಲ್ ಬೋರ್ಡ್ ಪ್ರಮಾಣಪತ್ರವನ್ನು ಅರುಣ್ ರಂಗನಾಥ್ ಹೊಂದಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅರುಣ್ ರಂಗನಾಥ್, 200 ಹಾಸಿಗೆಳುಳ್ಳ ಆಸ್ಪತ್ರೆಯಲ್ಲಿ ತಮ್ಮ 14 ಗಂಟೆಗಳ ಸತತ ಸೇವೆಯ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. 

ವೆಂಟಿಲೇಟರ್, ಶ್ವಾಸಕೋಶಶಾಸ್ತ್ರಜ್ಞ, ಐಸಿಯು ತಜ್ಞ, ಅರಿವಳಿಕೆ ತಜ್ಞರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದು ರೋಗಿಗಳು ಗುಣಮುಖರಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ಅರುಣ್ ರಂಗನಾಥ್. 

ರೋಗಿಗಳನ್ನು ಗುಣಪಡಿಸಲು ಹೈಡ್ರಾಕ್ಸಿಕ್ಲೊರೊಕ್ವಿನ್, ಅಜಿಥ್ರೊಮೈಸಿನ್ ಗಳನ್ನು ಬಳಕೆ ಮಾಡಿದ್ದೇವೆ. ಆದರೆ ಅದರಿಂದ ಅತಿ ಹೆಚ್ಚು ವ್ಯತ್ಯಾಸವಾಗಲಿದೆ ಎಂದೆನಿಸುವುದಿಲ್ಲ. ಅವುಗಳ ಪರಿಣಾಮಕಾರಿತ್ವದ ಬಗ್ಗೆ ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಅದರಿಂದ ದುಷ್ಪರಿಣಾಮಗಳೂ ಉಂಟಾಗುವುದಿಲ್ಲ ಎಂದು ಅರುಣ್ ರಂಗನಾಥ್ ವಿವರಿಸಿದ್ದಾರೆ. 

ಭಾರತದಂತಹ ರಾಷ್ಟ್ರಗಳಲ್ಲಿ ಸಾಮಾನ್ಯ ವೈದ್ಯರಿಗೂ ಐಸಿಯು ನಿಭಾಯಿಸುವ, ತುರ್ತು ಸೇವೆಗಳನ್ನು ನಿಭಾಯಿಸುವ  ತರಬೇತಿ ನೀಡಬೇಕು. ಭಾರತದಲ್ಲಿ ಕಡಿಮೆ ಪ್ರಕರಣಗಳು ಕಂಡುಬಂದಿವೆ ಎಂದು ಸಮಾಧಾನವಾಗಿರುವುದು ಸಾಧ್ಯವಿಲ್ಲ. ಆದರೆ ರೋಗಲಕ್ಷಣಗಳೇ ಇಲ್ಲದಂತಹ 10 ಪಟ್ಟು ಪ್ರಕರಣಗಳಿರಬಹುದು, ಆರಂಭಿಕ ಪತ್ತೆಮಾಡುವುದೇ ಸೂಕ್ತ ಎಂದು ಅರುಣ್ ರಂಗನಾಥ್ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT