ದೇಶ

ಕೋವಿಡ್-19: ಸೋಂಕಿಗೊಳಗಾಗಿದ್ದ ಮಧ್ಯಪ್ರದೇಶ ಪೊಲೀಸ್ ಸಾವು

Manjula VN

ನವದೆಹಲಿ: ಮಹಾಮಾರಿ ಕೊರೋನಾ ದೇಶದಲ್ಲಿ ರುದ್ರತಾಂಡವವನ್ನಾಡುತ್ತಿದ್ದು, ಇದೇ ಮೊದಲ ಬಾರಿಗೆ ವೈರಸ್'ಗೆ ಪೊಲೀಸ್ ಒಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. 

ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ 43 ವರ್ಷದ ಒಬ್ಬರಲ್ಲಿ ಕೆಲ ದಿನಗಳ ಹಿಂದಷ್ಟೇ ವೈರಸ್ ದೃಢಪಟ್ಟಿತ್ತು. ಬಳಿಕ ಅವರನ್ನು ಇಂದೋರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. 

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಮೃತಪಟ್ಟ ಪೊಲೀಸ್'ರನ್ನು ದೇವಂದೇರ ಚಂದ್ರವಂಶಿ ಎಂದು ಗುರ್ತಿಸಲಾಗುತ್ತಿದ್ದು, ಇವರು ಮಧ್ಯಪ್ರದೇಶದ ಶಜಾಪುರ ಜಿಲ್ಲೆಯ ನಿವಾಸಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. 

ಈ ನಡುವೆ ದೇಶದಲ್ಲಿ ಸೋಂಕಿತರ ಸಂಖ್ಯೆ 15,712ಕ್ಕೆ ಏರಿಕೆಯಾಗಿದ್ದು, 507 ಮಂದಿ ಬಲಿಯಾಗಿದ್ದಾರೆ. ಅಲ್ಲದೆ, 2231 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆಂದು ತಿಳಿದುಬಂದಿದೆ. 

SCROLL FOR NEXT