ದೇಶ

ದೆಹಲಿ: ಅಕ್ರಮ ಮದ್ಯ ಸಾಗಿಸುತ್ತಿದ್ದ ರಾಜ್ಯದ ಕಾಂಗ್ರೆಸ್ ಕಾರ್ಯಕರ್ತನ ಬಂಧನ

Raghavendra Adiga

ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಇದ್ದು ಮದ್ಯ ಮಾರಾಟ ಬಂದ್ ಆಗಿದೆ. ಈ ನಡುವೆ 12 ಬಾಟಲಿಗಳಷ್ಟು ಅಕ್ರಮ ಮದ್ಯಗಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತೆಲಂಗಾಣದ ತಲಾ ಒಬ್ಬೊಬ್ಬ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ.

ಕರ್ನಾಟಕದ ಮನೀಶ್ ಬಸವರಾಜ್ ಶಿಳ್ಳೆ ಹಾಗೂ ತೆಲಂಗಾಣದ ರಾಮಗಾಡು ಶ್ರವಣ್ ರಾವ್ ಎನ್ನುವವರನ್ನು ಬಂಧಿಸಲಾಗಿದೆ.  ಭಾನುವಾರ ವಸಂತ್ ಕುಂಜ್ ಬಳಿಯ ರಾಜೋಕ್ರಿ ಗಡಿಯಲ್ಲಿನ ಚೆಕ್ ಪೋಸ್ಟ್ ಸಮೀಪ ಅಕ್ರಮ ಮದ್ಯ ಸಾಗಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಹಿರಿಯ ರಾಜಕಾರಣಿಯ ಆಪ್ತನಾಗಿದ್ದ ಮನೀಶ್ ಬಸವರಾಜ್ ಅವರನ್ನು ಬಂಧಿಸಲಾಗಿದೆ. 

ಆರೋಪಿಗಳು ತೆಲಂಗಾಣ ನೋಂದಣಿ ಸಂಖ್ಯೆಯನ್ನು ಹೊಂದಿರುವ ಸ್ಕಾರ್ಪಿಯೋ ಕಾರಿನಲ್ಲಿ ಮದ್ಯ ಸಾಗಾಟ ನಡೆಸಿದ್ದರು.ಚೆಕ್ ಪೋಸ್ಟ್ ನಲ್ಲಿ ಪೋಲೀಸರು ಕಾರನ್ನು ತಡೆದಾಗ ತಾವು ತುರ್ತು ಕರ್ತವ್ಯದಲ್ಲಿದ್ದೇವೆಂದು ನೆಪ ಹೇಳಿದ್ದಾರೆ. ಆದರೆ ಪೊಲೀಸರು ವಾಹನವನ್ನು ಪರಿಶೀಲಿಸಿದಾಗ ವಾಹನದ ಹಿಂದಿನ ಸೀಟಿನ ಕೆಳಗೆ ತುಂಬಿದ ಕ್ರೇಟ್‌ನಲ್ಲಿ ಬಾಟಲಿಗಳನ್ನು ಇರಿಸಿರುವುದು ತಿಳಿದುಬಂದಿದೆ. 

ಗುರಗಾಂವ್‌ನಲ್ಲಿ ಅಕ್ರಮ ಮದ್ಯ ಖರೀದಿಸಿ ಅದನ್ನು  ಹರಿಯಾಣಕ್ಕೆ ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಬಂಧಿತರ ವಿರುದ್ಧ ದೆಹಲಿ ಅಬಕಾರಿ ಕಾಯ್ದೆಯ  ಸೆಕ್ಷನ್ 33 ಮತ್ತು 58 ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

SCROLL FOR NEXT