ದೇಶ

ಜಾರ್ಖಂಡ್: ತನಗೆ 'ಕೊರೋನಾ ಇದೆ' ಎಂದು ಸಾಮಾಜಿಕ ತಾಣದಲ್ಲಿ ಘೋಷಿಸಿಕೊಂಡ ವ್ಯಕ್ತಿ ನೇಣಿಗೆ ಶರಣು!

Raghavendra Adiga

ರಾಂಚಿ: ತನಗೆ ಕೊರೋನಾ ಪಾಸಿಟಿವ್ ಇದೆ ಎಂದು ಸಾಮಾಜಿಕ ತಾಣದ ಮೂಲಕ ತಾನೇ ಸ್ವಯಂ ಘೋಷಿಸಿಕೊಂಡ ವ್ಯಕ್ತಿಯೊಬ್ಬ  ತನ್ನ ಮನೆಯ ಚಾವಣಿಯಲ್ಲಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್ ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ.

ಗಿರಿದಿಹ್ ನ ಬಿರ್ನಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈದಪಹ್ರಿ ಗ್ರಾಮದ ನಿವಾಸಿ ಖಾಸಗಿ ಶಾಲಾ ಇಂಗ್ಲಿಷ್ ಶಿಕ್ಷಕ  ಸುರೇಶ್ ಪಂಡಿತ್, (28) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.

ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸುರೇಶ್ ತಾನು ಕೊರೋನಾವೈರಸ್ ಸೋಂಕಿಗೆ ತುತ್ತಾಗಿದ್ದೇನೆ ಎಂದು ಭ್ರಮಿಸಿ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಖಿನ್ನತೆಯ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಮೃತನ ಕುಟುಂಬ ಸದಸ್ಯರು ಸೋಮವಾರವೇ ಪಂಡಿತ್ ಅವರ ಶವವನ್ನು ಅಂತ್ಯಸಂಸ್ಕಾರ ಮಾಡಿದದ್ದರು. ಅದಾಗ್ಯೂ ಆತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆತ್ಮಹತ್ಯೆ ಸಂಬಂಧಿಸಿದ ಬರಹ ಹಂಚಿಕೊಂಡಿದ್ದು ಅದು  ವೈರಲ್ ಆದ ನಂತರ ಪೊಲೀಸರು ಎಚ್ಚರ ವಹಿಸಿದ್ದಾರೆ.ಬರಹದಲ್ಲಿ ಸುರೇಶ್ ತಾನು ಕೊರೋನಾ ಸೋಂಕಿಗೆ ತುತ್ತಾಗಿದ್ದೇನೆ ಎಂದು ಬರೆದುಕೊಂಡಿದ್ದಾನೆ. ಮೂರು ಪುಟಗಳ ಆತ್ಮಹತ್ಯೆ ಕುರಿತ ಬರಹದಲ್ಲಿ ಅವರು ಮನೆಯಲ್ಲಿ ತಮ್ಮನ್ನು ತಾವು ಕ್ವಾರಂಟೈನ್ ಮಾಡಿಕೊಂಡಿದ್ದಾಗಿ ಯಾರನ್ನೂ ತನ್ನ ಹತ್ತಿರ ಬರಲು ಅನುಮತಿಸದಿದ್ದದ್ದನ್ನು ಒಪ್ಪಿಕೊಂಡಿದ್ದಾನೆ. ತನಗೆ ಕೊರೋನಾ ಇದೆ ಎಂದು ತಿಳಿಯಲು ಬಹಳ ತಡವಾಗಿತ್ತು.ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಆತ ಬರೆದುಕೊಂಡಿದ್ದಾನೆ.

ಸುರೇಶ್  ಕೆಲವು ದಿನಗಳ ಹಿಂದೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದನು. ಅಲ್ಲಿನ ಯಾರೊಬ್ಬರೊಂದಿಗಿನ ಸಂಪರ್ಕದಿಂದ ತನಗೆ ಸೋಂಕು ತಗುಲಿದೆ ಎಂದು ಆತ ಭಾವಿಸಿದ್ದನು.ತಪಾಸಣೆಗಾಗಿ ಅವರು ಏಪ್ರಿಲ್ 18 ರಂದು ಬಿರ್ನಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ. ಆದರೆ ಆತನ ದೇಹದಲ್ಲಿ ಕೊರೋನಾ ರೋಗಾಣುವಿನಕುರುಹು ಪತ್ತೆಯಾಗಿಲ್ಲ ಎಂದು ಅವರನ್ನು ಹಿಂದಕ್ಕೆ ಕಳಿಸಲಾಗಿತ್ತು."ಇದು ಖಿನ್ನತೆಯ ಪ್ರಕರಣವಾಗಿದ್ದು ಆತ ಕೊರೋನಾವೈರಸ್  ಸೋಂಕಿಗೆ ಒಳಗಾಗಿದ್ದಾನೆಂದು ಶಂಕಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ" ಎಂದು ಪೋಲೀಸರು ವಿವರಿಸಿದ್ದಾರೆ.

SCROLL FOR NEXT