ದೇಶ

ವಿಶ್ವ ಭೂ ದಿನಕ್ಕೆ ವಿಶೇಷ ಡೂಡಲ್ ಬಿಡಿಸಿದ ಡೂಡಲ್

Manjula VN

ನವದೆಹಲಿ: ವಿಶ್ವದಾದ್ಯಂದ ಏಪ್ರಿಲ್ 22ರಂದು ವಿಶ್ವ ಭೂ ದಿನವನ್ನು ಆಚರಿಸಲಾಗುತ್ತಿದ್ದು, ಗೂಗಲ್ ಕೂಡ ಇಂದು ವಿಶೇಷವಾದ ಡೂಡಲ್ ಬಿಡಿಸುವ ಮೂಲಕ ವಿಶ್ವ ಭೂ ದಿನವನ್ನು ಆಚರಿಸಿದೆ. 

ನಮ್ಮ ಭೂಮಿ ತುಂಬಾ ಚಿಕ್ಕದಾಗಿದ್ದು, ಈ ಭೂಮಿಯಲ್ಲಿನ ವಿಸ್ಮಯದಲ್ಲಿ ಅತೀ ಚಿಕ್ಕ ಹಾಗೂ ನಿರ್ಣಾಯಕ ಜೀವಿಯಾದ ಜೇನು ಹುಳುವಿಗೆ ವಿಶ್ವ ಭೂ ದಿನವನ್ನು ಗೂಗಲ್ ಅರ್ಪಿಸಿದೆ. 

ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಳಸಿ ಡೂಡಲ್ ಗೂಗಲ್ ವಿಶ್ವ ಭೂ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದೆ. 

ಗೂಗಲ್ ಸೃಷ್ಟಿಸಿರುವ ಡೂಡಲ್ ನಲ್ಲಿ ಜೇನುನೊಣವೊಂದು ಕಂಡು ಬರುತ್ತಿದ್ದು, ಬಳಕೆದಾರರು ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೇ ಒಂದು ಚಿಕ್ಕ ವಿಡಿಯೋ ಪ್ಲೇ ಆಗುತ್ತಿದೆ. ಅದರಲ್ಲಿ ಜೇನುನೊಣಗಳು ಹೂವಿನಿಂದ ಹೂವಿಗೆ ಹಾರುವ ಮೂಲಕ ಪರಾಗಸ್ಪರ್ಶ ಮಾಡುವ ವಿಧಾನವನ್ನು ತೋರಿಸಲಾಗಿದೆ. ಜೊತೆಗೆ ಜೇನುನೊಣಗಳು ವಿಶ್ವದ ಮೂರನೇ ಎರಡರಷ್ಟು ಬೆಳೆಗಳನ್ನು ಕೊಡುಗೆಯಾಗಿ ನೀಡಿರುವುದರಿಂದ ಅವುಗಳ ಮಹತ್ವವನ್ನು ತೋರಿಸಲಾಗಿದೆ. ಜೇನುನೊಣಗಳು ಹೂವುಗಳನ್ನು ಪರಾಗಸ್ಪರ್ಶ ಮಾಡಿ ವಿಶ್ವದ ಸೇ.85 ರಷ್ಟು ಹೂವುಗಳ ಬೆಳವಣಿಗೆಗೆ ಕಾರಣವಾಗಿದೆ. ಅವುಗಳಿಂದ ಹೂವಿನಿಂದ ಹೂವಿಗೆ ಹಾಕಿ ಮಾಡುವ ಪರಾಗಸ್ಪರ್ಶ ಕ್ರಿಯೆ ನಡೆಸುವುದು ಮತ್ತು ನಮ್ಮ ಭೂಮಿಯ ಕೆಲವೊಂದು ವಿಸ್ವಯ ಸಂಗತಿಗಳನ್ನು ಇಲ್ಲಿ ತಿಳಿಸಲಾಗಿದೆ. 

SCROLL FOR NEXT