ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಚೀನಾದಿಂದ ಮಹಾಮೋಸ: ಚೀನಾದ 2 ಕಂಪನಿಗಳ ಕೊರೋನಾ ಪರೀಕ್ಷಾ ಕಿಟ್‌ಗಳು ಕಳಪೆ? ಐಸಿಎಂಆರ್ ತನಿಖೆ

ಮಹಾಮಾರಿ ಕೊರೋನಾ ವೈರಸ್ ಸೋಂಕು ಪತ್ತೆ ಹಚ್ಚುವ ಸಲುವಾಗಿ ಚೀನಾದಿಂದ ತರಸಿಕೊಂಡಿದ್ದ ರ್ಯಾಪಿಡ್ ಆ್ಯಂಟಿ ಬಾಡಿ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ತನಿಖೆ ಕೈಗೊಂಡಿದೆ.

ಕೊರೋನಾ ಟೆಸ್ಟ್
Vishwanath S
Updated On : 22 Apr 2020, 7:46 pm

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ಸೋಂಕು ಪತ್ತೆ ಹಚ್ಚುವ ಸಲುವಾಗಿ ಚೀನಾದಿಂದ ತರಸಿಕೊಂಡಿದ್ದ ರ್ಯಾಪಿಡ್ ಆ್ಯಂಟಿ ಬಾಡಿ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ತನಿಖೆ ಕೈಗೊಂಡಿದೆ. 

ಚೀನಾದಿಂದ ತರಿಸಿಕೊಂಡಿರುವ ಪರೀಕ್ಷಾ ಕಿಟ್ ಗಳ ಪೈಕಿ ಎರಡು ಕಂಪನಿಗಳ ಕಿಟ್ ಗಳು ಸರಿಯಾಗಿ ಫಲಿತಾಂಶ ಮತ್ತು ವ್ಯತ್ಯಾಸಗಳಿಂದ ಕೂಡಿದ್ದು ಈ ಹಿನ್ನೆಲೆಯಲ್ಲಿ ಐಸಿಎಂಆರ್ ಈ ಬಗ್ಗೆ ತನಿಖೆ ಕೈಗೊಂಡಿದ್ದು ಇನ್ನು ಎರಡು ದಿನಗಳ ಕಾಲ ತನಿಖೆ ಪೂರ್ಣಗೊಳ್ಳುವವರೆಗೂ ಈ ಪರೀಕ್ಷಾ ಕಿಟ್ ಗಳ ಬಳಕೆ ಮಾಡುವುದು ಬೇಡ ಎಂದು ರಾಜ್ಯಗಳಿಗೆ ಮನವಿ ಮಾಡಿದೆ.  

7 ಲಕ್ಷ ಕಿಟ್ ಗಳು ಚೀನಾದ ಈ ಎರಡೂ ಕಂಪನಿಗಳಿಂದ ಬಂದಿದ್ದು ಇವುಗಳು ದೋಷಪೂರಿತವಾಗಿದೆ ಎಂದು ದೂರು ಕೇಳಿಬಂದಿದೆ. ಇನ್ನು ಏರ್ ಇಂಡಿಯಾ ಮತ್ತು ಇತರ ವಾಣಿಜ್ಯ ಭಾರತೀಯ ಜೆಟ್ ಲೈನರ್ ಗಳ ಮೂಲಕ ಈ ಕಿಟ್ ಗಳನ್ನು ಚೀನಾದಿಂದ ತರಿಸಿಕೊಳ್ಳಲಾಗಿತ್ತು.

Advertisement

Advertisement

ದೋಷಪೂರಿತ ಕಿಟ್ ಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ರಾಯಭಾರ ಕಚೇರಿ ರಫ್ತಾಗಿರುವ ವೈದ್ಯಕೀಯ ಉತ್ಪನ್ನಗಳ ಗುಣಮಟ್ಟಕ್ಕೆ ಚೀನಾ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಸಂಬಂಧ ಭಾರತೀಯ ಏಜೆನ್ಸಿಯೊಂದಿಗೆ ಸಂವಹನ ನಡೆಸುತ್ತದೆ ಮತ್ತು ಅಗ್ಯ ನೆರವು ನೀಡುತ್ತೆದ ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement