ದೇಶ

ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ಕೋರಿ ಪ್ರಧಾನಿಗೆ ಸೋನಿಯಾ ಪತ್ರ

Nagaraja AB

ನವದೆಹಲಿ: ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳ (ಎಂಎಸ್ ಎಂಇ ವಲಯ) ಪುನಶ್ಚೇತನಕ್ಕೆ ಹಣಕಾಸಿನ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಒಂದು ವೇಳೆ ತಮ್ಮ ಬೇಡಿಕೆಯನ್ನು ನಿರ್ಲಕ್ಷಿಸಿದರೆ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಆರ್ಥಿಕ ಸಮಸ್ಯೆ ದೇಶದ ಆರ್ಥಿಕತೆ ಮೇಲೆ ತುಂಬಾ ಪರಿಣಾಮ ಬೀರಲಿದೆ ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ತಿಳಿಸಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಎಂಎಸ್ ಎಂಇ ವಲಯ ತೀವ್ರ ಸಂಕಷ್ಟದಲ್ಲಿದೆ. ಈ ಬಿಕ್ಕಟಿನಿಂದ ಅವುಗಳು ಹೊರ ಬರಲು 24 ಗಂಟೆಗಳ ಸಹಾಯವಾಣಿ ಮೂಲಕ ನೆರವು ನೀಡಬೇಕು, 1 ಲಕ್ಷ ಕೋಟಿ ಎಂಎಸ್ ಎಂಇ ವೇತನ ರಕ್ಷಣೆ ಪ್ಯಾಕೇಜ್ ಘೋಷಿಸುವಂತೆ ಸೋನಿಯಾ ಗಾಂಧಿ ಸಲಹೆ ನೀಡಿದ್ದಾರೆ. 

ಲಾಕ್ ಡೌನ್ ನಿಂದಾಗಿ ಎಂಎಸ್ ಎಂಇ ವಲಯಕ್ಕೆ ಪ್ರತಿದಿನ 30  ಸಾವಿರ ಕೋಟಿ ನಷ್ಟವಾಗುತ್ತಿದೆ. ದೇಶದ ಆರ್ಥಿಕ ಬೆನ್ನೆಲುಬಿನಂತಿರುವ ಅವುಗಳ ಪುನರುಜ್ಜೇವನಕ್ಕೆ ಪ್ರಯತ್ನಿಸಬೇಕು, ಒಂದು ವೇಳೆ ತಮ್ಮ ಸಲಹೆಗಳನ್ನು ನಿರ್ಲಕ್ಷಿಸಿದರೆ ದೇಶದ ಆರ್ಥಿಕತೆ ಮೇಲೆ ತೀವ್ರ ಹಾನಿಯಾಗಲಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

SCROLL FOR NEXT