ದೇಶ

ಚೀನಾದಿಂದ ವಿಮುಖವಾದ ಜಗತ್ತು, ಭಾರತವೇ ಪರ್ಯಾಯ; ಇದು ನಮಗೆ ವರದಾನ: ಕೇಂದ್ರ ಸಚಿವ ನಿತಿನ್ ಗಡ್ಕರಿ

Srinivasamurthy VN

ನವದೆಹಲಿ: ಪ್ರಸಕ್ತ ಬೆಳವಣಿಗೆಯಲ್ಲಿ ಜಗತ್ತು ಚೀನಾದೊಂದಿಗೆ ವ್ಯವಹಾರ ಮಾಡಲು ಬಯಸುತ್ತಿಲ್ಲ. ಜಗತ್ತಿಗೆ ಚೀನಾ ಬಳಿಕ ಭಾರತವೇ ಪರ್ಯಾಯ ಮಾರ್ಗವಾಗಿ ಕಾಣುತ್ತಿದ್ದು, ಇದು ನಮಗೆ ವರವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ನಿತಿನ್ ಗಡ್ಕರಿ ಅವರು ನಷ್ಟ ಅನುಭವಿಸುತ್ತಿರುವ ಎಂಎಸ್‌ಎಂಇಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು) ಬೆಂಬಲಿಸುವ ಸರ್ಕಾರದ ಯೋಜನೆಗಳ ಕುರಿತು ವ್ಯಾಪಕ ಚರ್ಚೆಯ ಸಂದರ್ಭದಲ್ಲಿ ಕರೋನವೈರಸ್  ಮತ್ತು ಲಾಕ್ ಡೌನ್ ಮುಗಿದ ನಂತರ ರಾಷ್ಟ್ರೀಯ ಆರ್ಥಿಕತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತಾಗಿ ಅವರು ಮಾತನಾಡಿದರು. ಈ ವೇಳೆ, 'ಜಗತ್ತು ಚೀನಾದೊಂದಿಗೆ ವ್ಯವಹಾರ ಮಾಡಲು ಬಯಸುವುದಿಲ್ಲ ಮತ್ತು ಇದು ಭಾರತಕ್ಕೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ಖ್ಯಾತನಾಮ  ವಿದೇಶಿ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲಿವೆ. ಇದು ಭಾರತಕ್ಕೆ ವರದಾನವಾಗಲಿದೆ ಎಂದು ಹೇಳಿದ್ದಾರೆ.

'ಜಗತ್ತಿನಾದ್ಯಂತ ಪ್ರತಿ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ.ಆದರೆ ವಿಶ್ವದ ಪ್ರತಿಯೊಂದು ದೇಶವೂ ಇದೀಗ ಚೀನಾದೊಂದಿಗೆ ವ್ಯಾಪಾರ ಮಾಡಲು ಬಯಸುವುದಿಲ್ಲ, ಇದು ನಮಗೆ ಆಶೀರ್ವಾದವಾಗಿದೆ. 2025 ರ ವೇಳೆಗೆ ಭಾರತವನ್ನು ಐದು ಟ್ರಿಲಿಯನ್ ಡಾಲರ್  ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯನ್ನು ಈಡೇರಿಸಲು ಸರ್ಕಾರಕ್ಕೆ ಇದೊಂದು ಅವಕಾಶವಾಗಿದೆ. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ಮೋದಿ ಅವರ ದೃಷ್ಟಿಕೋನವನ್ನು ಈಡೇರಿಸಲು ಹೊಸ  ತಂತ್ರಜ್ಞಾನವನ್ನು ಹೂಡಿಕೆಗಳಾಗಿ ಪರಿವರ್ತಿಸಲು ಜಂಟಿ ಕಾರ್ಯದರ್ಶಿಯನ್ನು ನಿಯೋಜಿಸುತ್ತೇವೆ ಎಂದು ಹೇಳಿದರು. 

SCROLL FOR NEXT