ದೇಶ

ಬೋರ್ ಆಗ್ತಿದೆಯೆಂದು ಇಸ್ಪೀಟ್ ಆಡಿ 24 ಜನರಿಗೆ ಕೊರೋನಾ ಸೋಂಕು ಹರಡಿದ ಟ್ರಕ್ ಚಾಲಕ 

Srinivas Rao BV

ಅಮರಾವತಿ: ಲಾಕ್ ಡೌನ್ ಹಿನ್ನೆಲೆ ಬೋರ್ ಆಗಿದೆ ಎಂದು ಸ್ನೇಹಿತನನ್ನು ಸೂಟ್ ಕೇಸ್ ನಲ್ಲಿ ತಂದಿದ್ದ ವ್ಯಕ್ತಿಯ ಬಗ್ಗೆ ಓದಿದ್ದಿರಿ. ಈಗ ಅಂಥಹದ್ದೇ ಒಂದು ಪ್ರಕರಣ ಆಂಧ್ರಪ್ರದೇಶದಲ್ಲಿ ನಡೆದಿದ್ದು 24 ಜನರಿಗೆ ಕೊರೋನಾ ಸೋಂಕು ಹರಡಿದೆ. 

ಆಂಧ್ರಪ್ರದೇಶದ ವಿಜಯವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಬೋರ್ ಆಗ್ತಿದೆ ಎಂಬ ಕಾರಣಕ್ಕಾಗಿ ನೆರೆಯವರು ಹಾಗೂ ಸ್ನೇಹಿತರೊಂದಿಗೆ ಇಸ್ಪೀಟ್ ಆಡಿದ ಟ್ರಕ್ ಚಾಲಕನೋರ್ವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತ ಪರಿಣಾಮ 24 ಜನರಿಗೆ ಕೊರೋನಾ ಸೋಂಕು ಹರಡಿದೆ. 

ಇನ್ನು ಮತ್ತೊಂದು ಪ್ರಕರಣದಲ್ಲಿ ಮತ್ತೋರ್ವ ಟ್ರಕ್ ಚಾಲಕನೋರ್ವ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತ ಪರಿಣಾಮ 15 ಜನರಿಗೆ ಕೊರೋನಾ ಸೋಂಕು ತಗುಲಿದೆ. ಈ ಎರಡು ಪ್ರತ್ಯೇಕ ಪ್ರಕರಣಗಳಿಂದ ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 40 ಕ್ಕೆ ಏರಿಕೆಯಾಗಿದೆ. 

ವಿಜಯವಾಡ ಒಂದರಲ್ಲೇ ಈ ವರೆಗೂ 100 ಪ್ರಕರಣಗಳಿವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 25 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಜಿಲ್ಲಾಧಿಕಾರಿ ಇಮ್ತಿಯಾಜ್ ತಿಳಿಸಿದ್ದಾರೆ. 

SCROLL FOR NEXT