ದೇಶ

ಹಿಮಾಚಲ ಪ್ರದೇಶದಲ್ಲಿ 4.0 ತೀವ್ರತೆಯ ಲಘು ಭೂಕಂಪ: ಚಂಬಾ ಜಿಲ್ಲೆಯ ಸುತ್ತಮುತ್ತ ನಡುಗಿದ ನೆಲದೊಡಲು

Raghavendra Adiga

ಶಿಮ್ಲಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಮಂಗಳವಾರ 4.0 ತೀವ್ರತೆಯ ಭೂಕಂಪನ ಸಂಭವಿಸಿದೆ..ಚಂಬಾ ಪ್ರದೇಶದಲ್ಲಿ ಇಂದು ಮಧ್ಯಾಹ್ನ 12: 17 ಕ್ಕೆ ಭೂಕಂಪನವು ಉಂಟಾಗಿದೆ ಎಂದು ಎಎನ್‌ಐ  ಸುದ್ದಿಸಂಸ್ಥೆ ವರದಿ ಮಾಡಿದೆ.

ಭೂಕಂಪನದಿಂದಾಗಿ ಅಕ್ಕಪಕ್ಕದ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ನಡುಗುವಿಕೆ ಅನುಭವವಾಗಿದೆ.. ಭೂಕಂಪದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಈ ಹಿಂದೆ ಮಾರ್ಚಿನಲ್ಲಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 3.6 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಮಾರ್ಚ್ 30 ರಂದು ಬೆಳಿಗ್ಗೆ 11:41 ಕ್ಕೆ ಈ ಪ್ರದೇಶದಲ್ಲಿ ಸಂಭವಿಸಿದ ಲಘು ಭೂಕಂಪನವು ಪಕ್ಕದ ಪ್ರದೇಶಗಳಲ್ಲಿಯೂ ನಡುಕ ಅನುಭವವನ್ನು ನೀಡಿತ್ತು.

ಚಂಬಾ ಸೇರಿದಂತೆ ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳು ಹೆಚ್ಚಿನ ಭೂಕಂಪನ ಸೂಕ್ಷ್ಮ ವಲಯದಲ್ಲಿದೆ.

ಇದಕ್ಕೆ ಮುನ್ನ ತಿಂಗಳ ಪ್ರಾರಂಬದಲ್ಲಿ ಲ್ಲಿ ದೆಹಲಿಯಲ್ಲಿ 3.5 ತೀವ್ರತೆಯ ಭೂಕಂಪನ ಸಂಭವಿಸಿತ್ತು.ಅದಲ್ಲದೆ ಮೊದಲ ಭೂಕಂಪನವಾಗಿದ್ದ ಮರುದಿನ ಮತ್ತೆ 2.7 ತೀವ್ರತೆಯ ಮತ್ತೊಂದು ಭೂಕಂಪವು ದೆಹಲಿಯಲ್ಲಿ ಸಂಬವಿಸಿತ್ತು. 24 ಗಂಟೆಗಳಲ್ಲಿ ಎರಡನೆ ಬಾರಿ ರಾಷ್ಟ್ರ ರಾಜಧಾನಿ ಭೂಕಂಪನ ಅನುಭವಕ್ಕೆ ಒಳಗಾಗಿತ್ತು.

SCROLL FOR NEXT