ದೇಶ

ರಾಮಾಯಣದ ಪಾಠಗಳ ಮೂಲಕ ವಿದ್ಯಾರ್ಥಿಗಳಿಗೆ ನಾಯಕತ್ವದ ತರಬೇತಿ ನೀಡಲಿರುವ ಜೆಎನ್ ಯು!

Srinivas Rao BV

ನವದೆಹಲಿ: ವಿದ್ಯಾರ್ಥಿಗಳಿಗೆ ನಾಯಕತ್ವದ ತರಬೇತಿ ನೀಡುವುದಕ್ಕೆ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯ ರಾಮಾಯಣದ ಮೊರೆ ಹೋಗಿದೆ. ವಿದ್ಯಾರ್ಥಿಗಳನ್ನು ಉತ್ತಮ ನಾಯತ್ವದಲ್ಲಿ ತೊಡಗಿಸುವ ಉದ್ದೇಶದಿಂದ ರಾಮಾಯಣದಿಂದ ನಾಯಕತ್ವದ ಪಾಠಗಳು ಎಂಬ ವಿಷಯದ ಬಗ್ಗೆ ವಿಶೇಷ ವೆಬಿನಾರ್ ಆಯೋಜಿಸಲಾಗುತ್ತಿದೆ. 

ಈ ಬಗ್ಗೆ ಮಾತನಾಡಿರುವ ವಿಶ್ವವಿದ್ಯಾನಿಲಯದ ಉಪಕುಲಪತಿ ಜಗದೀಶ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, "ಮಹಾತ್ಮಾ ಗಾಂಧಿ ಅವರೂ ಸಹ ರಾಮ ಹಾಗೂ ರಾಮನೊಬ್ಬನೇ ತಮ್ಮ ದೈವ ಹಾಗೂ ಗುರು ಎಂದು ಹೇಳಿದ್ದರು. ಭಗವಾನ್ ರಾಮಚಂದ್ರ ಸತ್ಯ, ನ್ಯಾಯ, ಸಮಾನತೆಗಳನ್ನು ಸಂಕಷ್ಟದ ಸಮಯದಲ್ಲೂ ಎತ್ತಿಹಿಡಿಯಲು ನಮಗೆ ಬೋಧಿಸಿದ್ದ ಅಂಶವನ್ನು ಗಾಂಧಿ ನಮಗೆ ಒತ್ತಿ ಹೇಳಿದ್ದರು". "ಸಂಕಷ್ಟದ ಸಂದರ್ಭಗಳಲ್ಲಿ ನಾವು ರಾಮಾಯಣದಿಂದ ಅತ್ಯುನ್ನತವಾದದ್ದನ್ನು ಕಲಿಯಬೇಕಾಗಿದೆ ಎಂದು ಜಗದೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಮೇ.02-03 ರಂದು ಸಂಜೆ 4-6 ಗಂಟೆಯವರೆಗೆ ರಾಮಾಯಣದ ಕುರಿತ ತರಗತಿ ಪ್ರಾರಂಭವಾಗಲಿದ್ದು, ಸಂಸ್ಕೃತ ಹಾಗೂ  ಇಂಡಿಕ್ ಸ್ಟಡೀಸ್ ವಿಭಾಗದ ಪ್ರೊಫೆಸರ್ ಸಂತೋಷ್ ಕುಮಾರ್ ಶುಕ್ಲಾ ಹಾಗೂ ಭಾಷೆ, ಸಂಸ್ಕೃತಿ ಹಾಗೂ ಕಾವ್ಯ ವಿಭಾಗದ ಪ್ರೊಫೆಸರ್ ಮಝಾ ಆಸಿಫ್ ಪಾಠ ಮಾಡಲಿದ್ದಾರೆ.  

SCROLL FOR NEXT