ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಮುಂದಿನ ವರ್ಷದ ಏರೋ ಇಂಡಿಯಾ ಪ್ರದರ್ಶನ ಬೆಂಗಳೂರಿನಲ್ಲೇ: ಕೇಂದ್ರ ಸರ್ಕಾರ ಘೋಷಣೆ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಮುಂದಿನ ಆವೃತ್ತಿಗೆ ದಿನಾಂಕ ಹಾಗೂ ಸ್ಥಳದ ಘೋಷಣೆಯಾಗಿದೆ.

ಸಂಗ್ರಹ ಚಿತ್ರ
Raghavendra Adiga
Updated On : 29 Apr 2020, 6:30 pm

ನವದೆಹಲಿ: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಮುಂದಿನ ಆವೃತ್ತಿಗೆ ದಿನಾಂಕ ಹಾಗೂ ಸ್ಥಳದ ಘೋಷಣೆಯಾಗಿದೆ. 

ಭಾರತೀಯ ಸೇನಾಪಡೆ ಮತ್ತು ವೈಮಾನಿಕ ಕ್ಷೇತ್ರದ ತಂತ್ರಜ್ಞಾನ ಉತ್ಪನ್ನಗಳ ಅನಾವರಣಗೊಳಿಸುವ ಏಷ್ಯಾದ ಅತೀದೊಡ್ಡ, ಪ್ರತಿಷ್ಠಿತ 'ಏರೋ ಇಂಡಿಯಾ 2021' ಶೋ ಈ ಬಾರಿಯೂ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲೇ ನಡೆಯಲಿದೆ. 

ಮುಂದಿನ ಏರೋ ಇಂಡಿಯಾ ಪ್ರದರ್ಶನವನ್ನು ಬೆಂಗಳೂರಿನಲ್ಲಿಯೇ ನಡೆಸುವಂತೆ ಇದೇ ಫೆಬ್ರವರಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಈ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.

Advertisement

Advertisement

ಮುಂದಿನ ವರ್ಷ ಅಂದರೇ ಫೆ.3 ರಿಂದ 7ರವರೆಗೂ ಐದು ದಿನಗಳ ಕಾಲ ಏರೋ ಇಂಡಿಯಾ ಶೋ ನಡೆಯಲಿದೆ ಎಂದು ಏರೋ ಇಂಡಿಯಾ ಮತ್ತು ರಕ್ಷಣಾ ಉತ್ಪನ್ನಗಳ ವಿಭಾಗದ ವೆಬ್ ಸೈಟ್ ತಿಳಿಸಿದೆ.

ಈ ಹಿಂದೆ ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆದಿದ್ದ ಏರೋ ಇಂಡಿಯಾ 2019 ಶೋ ಸಿಹಿ-ಕಹಿ ನೆನಪುಗಳೊಂದಿದೆ ಅಂತ್ಯ ಕಂಡಿತ್ತು. ಎರಡು ವರ್ಷದ ಹಿಂದೆ 2019ರಲ್ಲಿ ಫೆ.20 ರಿಂದ 24ರವರೆಗೆ ನಡೆದ ಏರೋ ಇಂಡಿಯಾ ಶೋ ಎರಡು ದುರ್ಘಟನೆಗಳಿಗೆ ಸಾಕ್ಷಿಯಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments