ದೇಶ

ಲೋಕಮಾನ್ಯ ಬಾಲಗಂಗಾಧರ ತಿಲಕರ 100ನೇ ಪುಣ್ಯತಿಥಿ: 'ಸ್ವರಾಜ್ಯ' ನಾಯಕನನ್ನು ಸ್ಮರಿಸಿದ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: 'ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು' ಎಂದು ಪ್ರತಿಪಾದಿಸಿದ್ದ ಭಾರತ ಸ್ವಾತಂತ್ರ್ಯ ಚಳವಳಿಯ ಮೊದಲ ನಾಯಕ ಲೋಕಮಾನ್ಯ ಬಾಲ ಗಂಗಾಧರ ತಿಲಕರ 100ನೇ ವರ್ಷದ ಪುಣ್ಯತಿಥಿ ಇಂದು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ.

ತಿಲಕರ ಬುದ್ಧಿವಂತಿಕೆ, ಜ್ಞಾನ, ಧೈರ್ಯ, ನ್ಯಾಯಪರತೆ, ಸ್ವರಾಜ್ ಪರಿಕಲ್ಪನೆ ನಮಗೆ ಎಂದೆಂದಿಗೂ ಸ್ಪೂರ್ತಿ ಎಂದು ಟ್ವೀಟ್ ಮಾಡಿ ಅವರ ಜೀವನದ ಕೆಲವು ಪ್ರಮುಖ ಘಟನೆಗಳು ಮತ್ತು ವಿಷಯಗಳು ಎಂದು ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪ್ರಧಾನಿಯವರಲ್ಲದೆ ಬಹುತೇಕ ಬಿಜೆಪಿ ನಾಯಕರು ಇಂದು ತಿಲಕರನ್ನು ತಮ್ಮದೇ ಶೈಲಿಯಲ್ಲಿ ಸ್ಮರಿಸಿಕೊಂಡಿದ್ದಾರೆ.

SCROLL FOR NEXT