ದೇಶ

'ಕರುಣೆ, ಅನುಕಂಪ': ಜಗತ್ತಿಗೆ ರಾಮಾಯಣದ ಮಹತ್ವ ಸಾರಿದ ವೆಂಕಯ್ಯ ನಾಯ್ಡು

Vishwanath S

ನವದೆಹಲಿ: ಪುರಾಣಗ್ರಂಥ ರಾಮಾಯಣ ಕರುಣೆ , ಅನುಕಂಪ, ಸಮಗ್ರತೆ, ಶಾಂತಿಯುತ ಸಹಬಾಳ್ವೆ ಮತ್ತು ಪ್ರಜಾಪ್ರಭುತ್ವಕ್ಕೆ ತಳಹದಿಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಬರೆದ ಲೇಖನವೊಂದರಲ್ಲಿ ನಾಯ್ಡು, ಶ್ರೀರಾಮನ ಪುರಾತನ ದೇಗುಲದ ನಿರ್ಮಾಣ ಆ.5ರಂದು ಆರಂಭಗೊಳ್ಳಲಿದೆ. ಈ ಅದ್ಭುತ ದೇಗುಲವನ್ನು ಜನರ ಅಭಿಲಾಷೆಗೆ ತಕ್ಕಂತೆ ನಿರ್ಮಿಸಲಾಗುವುದು ಎಂದಿದ್ದಾರೆ

ನಾವೆಲ್ಲರೂ ರಾಮಾಯಣ ಗ್ರಂಥದ ಸಾರ್ವತ್ರಿಕ ಮತ್ತು ಅಜರಾಮರ ಸಂದೇಶಗಳನ್ನು ಅರಿತು ಅವುಗಳ ಮೌಲ್ಯಗಳು ಮತ್ತು ಘನತೆಯಿಂದ ನಮ್ಮ ಜೀವನವನ್ನು ಸಮೃದ್ಧವಾಗಿಸೋಣ ಎಂದು ಅವರು ಕರೆ ನೀಡಿದ್ದಾರೆ.

SCROLL FOR NEXT