ದೇಶ

ಮೆಹಬೂಬಾ ಮುಫ್ತಿ ಬಿಡುಗಡೆಗೆ ರಾಹುಲ್ ಗಾಂಧಿ ಒತ್ತಾಯ

Nagaraja AB

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಲಾಗಿರುವ ಪಿಡಿಪಿ  ಮುಖಂಡೆ ಮೆಹಬೂಬಾ ಮುಫ್ತಿ ಅವರನ್ನು ಬಿಡುಗಡೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭಾನುವಾರ ಒತ್ತಾಯಿಸಿದ್ದಾರೆ.

 ರಾಜಕೀಯ ನಾಯಕರನ್ನು ಅಕ್ರಮವಾಗಿ ಕೇಂದ್ರ ಸರ್ಕಾರ ಬಂಧಿಸಲಾಗಿದ್ದು, ದೇಶದ ಪ್ರಜಾಪ್ರಭುತ್ವಕ್ಕೆ ದಕ್ಕೆಯಾಗಿದೆ. ಮೆಹಬೂಬಾ ಬಿಡುಗಡೆಯ ಸಮಯ ಇದಾಗಿದೆ  ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮೆಹಬೂಬಾ ಮುಫ್ತಿ ಬಂಧನ ವಿಸ್ತರಣೆ ಕಾನೂನು ನಿಂಧನೆ ಮತ್ತು ಸಾಂವಿಧಾನಿಕ ಹಕ್ಕುಗಳ ಮೇಲಿನ  ಹಲ್ಲೆ ಎಂದು ಶನಿವಾರ ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಹೇಳಿಕೆ ನೀಡಿದ್ದರು. ಶುಕ್ರವಾರ ಮುಫ್ತಿ ಅವರ ಬಂಧನವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿತ್ತು. 
 
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಫಾರೂಖ್ ಅಬ್ದುಲ್ಲಾ ,ಮೆಹಬೂಬಾ ಮುಫ್ತಿ ಮತ್ತಿತರ ಕಾಶ್ಮೀರದ ರಾಜಕೀಯ ಮುಖಂಡರನ್ನು ಬಂಧನದಲ್ಲಿಡಲಾಗಿದೆ.

SCROLL FOR NEXT