ದೇಶ

ತಮಿಳುನಾಡು ಗೌರ್ನರ್ ಗೆ ಕೊರೋನಾ ರೋಗಲಕ್ಷಣ ರಹಿತ ಸೋಂಕು ದೃಢ

Srinivas Rao BV

ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೋನಾ ಸೋಂಕು ದೃಢಪಟ್ಟಿರುವ ಸುದ್ದಿ ಬಂದ ನಂತರ ಈಗ ತಮಿಳುನಾಡು ರಾಜ್ಯಪಾಲರಿಗೂ ಕೊರೋನಾ ಸೋಂಕು ದೃಢವಾಗಿರುವುದು ವರದಿಯಾಗಿದೆ. 

ಬನ್ವಾರಿಲಾಲ್ ಪುರೋಹಿತ್ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ರೋಗಲಕ್ಷಣ ರಹಿತ (asymptomatic) ಸೋಂಕಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. 

ಮನೆಯಲ್ಲಿಯೇ ಐಸೊಲೇಷನ್ ನಲ್ಲಿರುವುದಕ್ಕೆ ವೈದ್ಯರು ಸಲಹೆ ನೀಡಿದ್ದಾರೆ. ಕಾವೇರಿ ಆಸ್ಪತ್ರೆಯ ವೈದ್ಯರ ತಂಡ ರಾಜ್ಯಪಾಲರ ಆರೋಗ್ಯದ ಬಗ್ಗೆ ಗಮನ ಹರಿಸಲಿದೆ. 

SCROLL FOR NEXT