ದೇಶ

ನಾನು ಭೂಮಿ ಪೂಜೆಗೆ ಹಾಜರಾಗಬೇಕೆನ್ನುವುದು ಶ್ರೀರಾಮನ ಇಚ್ಚೆ: ಬಾಬ್ರಿ ಪ್ರಕರಣದ ದಾವೆದಾರ ಇಕ್ಬಾಲ್ ಅನ್ಸಾರಿ

Raghavendra Adiga

ಅಯೋಧ್ಯಾ: ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಬುಧವಾರ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಲ್ಲದೆ ಪ್ರಧಾನಿ ನರೇಂದ್ರ ಮೋದಿಯವರಿಗೆ ’ರಾಮ ನಾಮಿ’ ಶಿಲೆ ಹಾಗೂ ರಾಮಚರಿತಮಾನಸ ಪ್ರತಿಯನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದ್ದಾರೆ.

"ಭೂಮಿ ಪೂಜೆ ಸಮಾರಂಭಕ್ಕಾಗಿ ಶ್ರೀ ರಾಮ  ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ನನಗೆ ಆಹ್ವಾನ ಬಂದಿದೆ. ನಾನು ಖಂಡಿತವಾಗಿಯೂ ಹಾಜರಾಗುತ್ತೇನೆ. ನ್ಯಾಯಾಲಯದ ತೀರ್ಪಿನ ನಂತರ ವಿವಾದ ಈಗ ಮುಗಿದಿದೆ" ಎಂದು 69 ವರ್ಷದ ಅನ್ಸಾರಿ ಪಿಟಿಐಗೆ ತಿಳಿಸಿದ್ದಾರೆ.

"ನಮ್ಮ ಪ್ರಧಾನಿ ಬರುತ್ತಿದ್ದಾರೆ. ನಾನು ಅವರನ್ನು ಭೇಟಿಯಾಗಿ ಅವರಿಗೆ ರಾಮ ನಾಮಿ ಶಿಲೆ (ಅದರ ಮೇಲೆ ರಾಮನ ಹೆಸರನ್ನು ಬರೆಯಲಾಗಿದೆ) ಮತ್ತು ರಾಮಚರಿತಮಾನಸ ಉಡುಗೊರೆ ನೀಡುತ್ತೇನೆ" ಎಂದು ಅನ್ಸಾರಿ ಹೇಳಿದರು.

ಬಾಬರಿ ಮಸೀದಿ-ರಾಮ್ ಜನ್ಮಭೂಮಿ ಭೂ ವಿವಾದ ಪ್ರಕರಣದ ಅತ್ಯಂತ ಹಳೆಯ ದಾವೆದಾರರಾಗಿದ್ದ ಅನ್ಸಾರ್ ಅವರ ತಂದೆ ಹಾಶಿಮ್ ಅನ್ಸಾರಿ 2016 ರಲ್ಲಿ ತಮ್ಮ 95 ನೇ ವಯಸ್ಸಿನಲ್ಲಿ ನಿಧನರಾದರು, ನಂತರ ಮಗನಾದ ಇಕ್ಬಾಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ಮುಂದುವರಿಸಿದ್ದರು. 

"ನಾನು ಅಯೋಧ್ಯೆಗೆ ಸೇರಿದವನು. ಇದೆಲ್ಲವೂ (ದೇವಾಲಯದ ನಿರ್ಮಾಣ) ಅಯೋಧ್ಯೆಯ ಭವಿಷ್ಯವನ್ನು ಬದಲಾಯಿಸುತ್ತದೆ. ನಾನು ಸಾಧು ಮತ್ತು ಸಂತರನ್ನು ಗೌರವಿಸುತ್ತೇನೆ. ಸಮಾರಂಭಕ್ಕೆ ಆಹ್ವಾನವನ್ನು ಸ್ವೀಕರಿಸಿದ್ದಕ್ಕೆ ನನಗೆ ಸಂತೋಷವಾಗಿದೆ. ನಾನು ಅದರಲ್ಲಿ ಪಾಲ್ಗೊಳ್ಳುವುದು ಭಗವಂತನಾದ ಶ್ರೀರಾಮನ ಇಚ್ಚೆಯಾಗಿದೆ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಹೇಳಿದರು

ನ್ಯಾಯಾಲಯವು ಒಂದೊಮ್ಮೆ ಅವರ ಪರವಾಗಿ ತೀರ್ಪು ನೀಡಿದ್ದರೆ ಆಗೇನು ಮಾಡುತ್ತಿದ್ದಿರಿ ಎಂದು ಕೇಳಲು ವಾದಿತ ಭೂಮಿಯಲ್ಲಿ ಶಾಲೆ ಮತ್ತು ಆಸ್ಪತ್ರೆಯ ನಿರ್ಮಾಣವನ್ನು  ಮಾಡುತ್ತಿದ್ದದ್ದಾಗಿ ಅನ್ಸಾರಿ ಹೇಳಿದರು. "ನಗರ ಅಭಿವೃದ್ಧಿಯ ನ್ನು ಎದುರು ನೋಡುತ್ತಿದೆ. ನಮ್ಮ ಮಕ್ಕಳ ಭವಿಷ್ಯವು ಸುರಕ್ಷಿತವಾಗಿರಬೇಕು ಮತ್ತು ಅವರಿಗೆ ಉದ್ಯೋಗ ಸಿಗಬೇಕು. ಧರ್ಮದ ಹೆಸರಿನಲ್ಲಿ ವಿವಾದ ಕೊನೆಯಾಗಬೇಕು. ನಗರವು ಹೊಸ ಆರಂಭಕ್ಕೆ ಸಾಕ್ಷಿಯಾಗಲು ನಾವು ಅವಕಾಶ ನೀಡಬೇಕು" ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ವಿವಾದಿತ ಸ್ಥಳದಲ್ಲಿ ಟ್ರಸ್ಟ್‌ನಿಂದ ರಾಮ ದೇವಾಲಯ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಕಳೆದ ವರ್ಷ ನವೆಂಬರ್‌ನಲ್ಲಿ ದಾರಿ ಮಾಡಿಕೊಟ್ಟಿತ್ತು ಮತ್ತು ಸುನ್ನಿ ವಕ್ಫ್ ಮಂಡಳಿಗೆ ಪರ್ಯಾಯ 5 ಎಕರೆ ಜಾಗವನ್ನು ನೀಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು ಅದರಂತೆ ಮಸೀದಿ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ಅಯೋಧ್ಯೆಯ ಸೊಹವಾಲ್ ತಹಸಿಲ್‌ನ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ.

SCROLL FOR NEXT