ದೇಶ

ಕರ ಸೇವಕರ ತ್ಯಾಗ-ಬಲಿದಾನ ಮರೆತುಬಿಡುವವರು 'ರಾಮ ದ್ರೋಹಿಗಳು'!

Shilpa D

ಮುಂಬಯಿ: ಅಯೋಧ್ಯೆಯಲ್ಲಿ ನಡೆಯುತ್ತಿರುವ ಭೂಮಿ ಪೂಜೆ ಸಮಯದಲ್ಲಿ ಕರ ಸೇವಕರನ್ನು ಮರೆತು ಬಿಡುವವರು ರಾಮ ದ್ರೋಹಿಗಳು ಎಂದು ಶಿವಸೇನೆ ಕಿಡಿಕಾರಿದೆ.

ಅಯೋಧ್ಯೆಯಲ್ಲಿ  ಭೂಮಿ ಪೂಜೆ ಇಡೀ ದೇಶಕ್ಕೆ ಮತ್ತು ಎಲ್ಲಾ ಹಿಂದೂಗಳಾದ್ದಾಗಿದೆ.ಮಂದಿರ ನಿರ್ಮಾಣದ ಕ್ರೆಡಿಟ್ ಅನ್ನು ಯಾರೊಬ್ಬರು ಪಡೆಯಬಾರದು ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದೆ.

ಭೂಮಿ ಪೂಜೆಯಲ್ಲಿ ವ್ಯಕ್ತಿ ಕೇಂದ್ರಿತ ಮತ್ತು ರಾಜಕೀಯ ಪಕ್ಷ ಕೇಂದ್ರಿತವಾಗಿದೆ ಎಂದು ಹೇಳಿದೆ. ರಾಮ ದೇವಾಲಯವನ್ನು ನಿರ್ಮಿಸುವ ಮಣ್ಣಿನಲ್ಲಿ ಕರ ಸೇವಕರ' ತ್ಯಾಗದ ವಾಸನೆ ಇದೆ, ಕರ ಸೇವಕರ ತ್ಯಾಗವನ್ನು ಮರೆತು ಬಿಡುವವರು ರಾಮ ದ್ರೋಹಿಗಳು ಎಂದು ಶಿವಸೇನೆ ಆರೋಪಿಸಿದೆ.

1992 ರಲ್ಲಿ ಕರ ಸೇವಕರು ಅಯೋಧ್ಯೆಯಲ್ಲಿ ಮಸೀದಿಯನ್ನು ಧ್ವಂಸಗೊಳಿಸಿದರು. ಹಾಗೂ ಅದೇ ಜಾಗದಲ್ಲಿ ಪ್ರಾಚೀನ ರಾಮಮಂದಿರ ನಿರ್ಮಿಸುವುದಾಗಿ ಘೋಷಿಸಿದ್ದರು.

ಇನ್ನೂ ಬಾಬ್ರಿ ಮಸೀದಿ ಕೆಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಸೇನೆಗೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ ಎಂದು ಪತ್ರಿಕೆ ತಿಳಿಸಿದೆ.

ಮೋದಿ ಆಡಳಿತಾವಧಿಯಲ್ಲಿ ರಾಮಮಂದಿರ ಕಾನೂನಾತ್ಮಕ ವಿಷಯ ಬಗೆಹರಿದಿದೆ, ಇಲ್ಲದಿದ್ದರೇ ಗಗೊಯಿ ಅವರು ರಾಜ್ಯಸಭಾ ಸದಸ್ಯರಾಗುತ್ತಿರಲಿಲ್ಲ ಎಂದು ಟೀಕಿಸಿದೆ.

ಬುಧವಾರ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆಯಲಿದೆ, ಇದಾದ ನಂತರ ರಾಮಮಂದಿರ ಸಂಬಂಧಿತ ಎಲ್ಲಾ ರಾಜಕೀಯಗಳು ಕೊನೆ ಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದೆ.

SCROLL FOR NEXT