ದೇಶ

ಬಿಹಾರ ಚುನಾವಣೆಗೆ ರಾಹುಲ್ ಮಾಸ್ಟರ್ ಪ್ಲಾನ್: ಕೊರೋನಾ-ಪ್ರವಾಹದ ವೇಳೆ ಜನರ ದನಿಯಾಗಲು ಕಾರ್ಯಕರ್ತರಿಗೆ ಸೂಚನೆ

Shilpa D

ಪಾಟ್ನಾ: ಅಕ್ಟೋಬರ್ ನಲ್ಲಿ ಬಿಹಾರ ವಿಧಾನ ಸಭೆ ಚುನಾವಣೆ ಎದುರಾಗಲಿದ್ದು, ಎಐಸಿಸಿ ನಾಯಕ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಬಿಹಾರದಲ್ಲಿ ಕೊರೋನಾ ವೈರಸ್ ಮತ್ತು ಪ್ರವಾಹದಂತ ಸಂದರ್ಭದಲ್ಲಿ ಜನರ ದನಿಯಾಗಬೇಕೆಂದು ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕೆಂದು  ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಗುರುವಾರ ನಡೆದ ವರ್ಚ್ಯುವಲ್ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಹಾರ ಕಾಂಗ್ರೆಸ್ ನಾಯಕರಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಅವಿವೇಕದ ರಾಜಕೀಯದಿಂದಾಗಿ ದೇಶವು ಬಿಕ್ಕಟ್ಟಿನ ಭೀಕರ ಹಂತವನ್ನು ತಲುಪುತ್ತಿದೆ, ಇಂಥಹ ಪರಿಸ್ಥಿತಿಯಲ್ಲಿ ನಾವು ಜನರ ಹಕ್ಕುಗಳನ್ನು ಪಡೆಲು ಅವರ ಪರವಾಗಿ ನಲ್ಲಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು, ಬಿಕ್ಕಟ್ಟಿನ ಸಮಯದಲ್ಲಿ ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಳ್ಳಲು ಸಲಹೆ ನೀಡಿದ್ದಾರೆ.

ಇನ್ನೂ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಪ್ರಸ್ತಾಪಿಸಿದ ರಾಹುಲ್ ಗಾಂಧಿ, ನಟನ ಸಾವಿನ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು. ಇನ್ನೂ ಚೀನಾ ಗಡಿ ವಿವಾದದ ಬಗ್ಗೆ ಮಾತನಾಡಿದ ರಾಹುಲ್ ಪ್ರಧಾನಿ ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.

SCROLL FOR NEXT