ದೇಶ

ಮಧ್ಯಪ್ರದೇಶ: ವಿದ್ಯಾರ್ಥಿಗೆ 2 ತಿಂಗಳು ಸಾಮಾಜಿಕ ಜಾಲತಾಣದಿಂದ ದೂರವಿರುವ ಷರತ್ತಿನ ಮೇಲೆ ಜಾಮೀನು!

Vishwanath S

ಭೋಪಾಲ್: ಸಾಮಾಜಿಕ ಮಾಧ್ಯಮದಿಂದ ಎರಡು ತಿಂಗಳ ದೂರವಿರುವಂತೆ ಸೂಚಿಸಿ ಷರತ್ತಿನೊಂದಿಗೆ ಮಧ್ಯಪ್ರದೇಶದ ಹೈಕೋರ್ಟ್‌ನ ಗ್ವಾಲಿಯರ್ ಪೀಠವು 18 ವರ್ಷದ ವಿದ್ಯಾರ್ಥಿಗೆ ಜಾಮೀನು ನೀಡಿದೆ. 

ನ್ಯಾಯಮೂರ್ತಿ ಆನಂದ್ ಪಾಠಕ್ ಅವರ ಏಕ ಪೀಠವು ಪ್ರೌಢಶಾಲೆಯ ಪಾಸ್ ಔಟ್ ಆಗಿರುವ ಹರೇಂದ್ರ ತ್ಯಾಗಿ ಕುರಿತು "ಡಿಜಿಟಲ್ ನಿರ್ವಿಶೀಕರಣ" ದ ಬಗ್ಗೆ ಮಾಸಿಕ ವರದಿಯನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಕೃಷಿ ಪೂರ್ವ ಪರೀಕ್ಷೆಯ ತನ್ನ ಅಧ್ಯಯನವನ್ನು ಪೂರ್ಣಗೊಳಿಸಲು ನ್ಯಾಯಾಲಯ ಆದೇಶಿಸಿದೆ.

ತ್ಯಾಗಿ ಪರ ವಕೀಲ ಸುಶಾಂತ್ ತಿವಾರಿ ಅವರು, ಕೊರೋನಾವೈರಸ್ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಮಯದಲ್ಲಿ ತಂಬಾಕು ಖರೀದಿಸಲು ಮನೆಯಿಂದ ಹೊರಬಂದಿದ್ದ ತ್ಯಾಗಿ ಭಿಂದ್ ಜಿಲ್ಲೆಯ ಅಂಗಡಿಯವರೊಂದಿಗೆ ಜಗಳವಾಡಿಕೊಂಡಿದ್ದ ಈ ಸಂಬಂಧ ಆತನನ್ನು ಬಂಧಿಸಲಾಗಿತ್ತು.

ಜೂನ್ 24ರಿಂದ ತ್ಯಾಗಿ ಬಂಧನದಲ್ಲಿದ್ದರು. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ತ್ಯಾಗಿ ವಿರುದ್ಧ ಸ್ವಯಂಪ್ರೇರಣೆಯಿಂದ ಗಾಯ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಲಾಗಿದೆ. 

ತ್ಯಾಗಿ ಕಠಿಣ ರೀತಿಯಲ್ಲಿ ಪಾಠ ಕಲಿತಿದ್ದಾನೆ. ಕೋವಿಡ್ 19 ಸಾಂಕ್ರಾಮಿಕ ರೋಗವನ್ನು ಪರಿಗಣಿಸಿ ಪ್ರಕರಣವನ್ನು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ತ್ಯಾಗಿ ತಿಳಿಸಿದರು.

ವಾದ ವಿವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ಪಾಠಕ್ ಕೆಲವು ಷರತ್ತುಗಳೊಂದಿಗೆ ಆರೋಪಿಗಳಿಗೆ ಜಾಮೀನು ನೀಡಿತ್ತು.

SCROLL FOR NEXT