ಜಗರ್ನಾಥ್ ಮಹತೋ 
ದೇಶ

'ಕಡಿಮೆ ಓದಿದ್ದವ'ರೆಂಬ ಕಳಂಕದಿಂದ ಮುಕ್ತರಾಗಲು ಮತ್ತೆ ಶಾಲೆಗೆ ದಾಖಲಾದ ಶಿಕ್ಷಣ ಸಚಿವ!

ರಾಜ್ಯದ ಶಿಕ್ಷಣ ಸಚಿವರೊಬ್ಬರು ತಾವು ಹತ್ತನೇ ತರಗತಿ ಪಾಸ್ ಗಿಂತ ಹೆಚ್ಚು ಓದಿಲ್ಲವೆನ್ನುವ  ಬೇಸರದಿಂದ ಈಗಲಾದರೂ ಹೆಚ್ಚಿನ ಶಿಕ್ಷಣ ಮಾಡಿಕೊಳ್ಲಬೇಕೆಂದು ಬಯಸಿ ಮೆಟ್ರಿಕ್ಯುಲೇಷನ್ ತರಗತಿಗೆ ಸೇರಿದ್ದಾರೆ! ಹೌದು ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಬೊಕಾರೊದಲ್ಲಿನ ಶಾಲೆಗೆ ದಾಖಲಾಗಿದ್ದಾರೆ. ಈ ಶಾಲೆ  2006 ರಲ್ಲಿ ಅವರೇ ಸ್ಥಾಪಿಸಿದ್ದ ಶಾಲೆ ಎನ್ನುವುದು ವ

ರಾಂಚಿ: ರಾಜ್ಯದ ಶಿಕ್ಷಣ ಸಚಿವರೊಬ್ಬರು ತಾವು ಹತ್ತನೇ ತರಗತಿ ಪಾಸ್ ಗಿಂತ ಹೆಚ್ಚು ಓದಿಲ್ಲವೆನ್ನುವ  ಬೇಸರದಿಂದ ಈಗಲಾದರೂ ಹೆಚ್ಚಿನ ಶಿಕ್ಷಣ ಮಾಡಿಕೊಳ್ಲಬೇಕೆಂದು ಬಯಸಿ ಮೆಟ್ರಿಕ್ಯುಲೇಷನ್ ತರಗತಿಗೆ ಸೇರಿದ್ದಾರೆ! ಹೌದು ಜಾರ್ಖಂಡ್ ರಾಜ್ಯದ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಬೊಕಾರೊದಲ್ಲಿನ ಶಾಲೆಗೆ ದಾಖಲಾಗಿದ್ದಾರೆ. ಈ ಶಾಲೆ  2006 ರಲ್ಲಿ ಅವರೇ ಸ್ಥಾಪಿಸಿದ್ದ ಶಾಲೆ ಎನ್ನುವುದು ವಿಶೇಷ. ತಾವು "ಕಡಿಮೆ ಓದಿರುವ" ಶಿಕ್ಷಣ ಸಚಿವರೆಂದು ಕರೆಸಿಕೊಳ್ಳುವುದರುಂದ ಪಾರಾಗಲು ಮಹತೋ ಇಂಟರ್-ಆರ್ಟ್ಸ್ ವಿದ್ಯಾರ್ಥಿಯಾಗಿ ಶಾಲೆಗೆ ಪ್ರವೇಶ ಪಡೆದಿದ್ದಾಗಿ ಹೇಳಿಕೊಂಡಿದ್ದಾರೆ.

ಶಿಕ್ಷಣ ಸಚಿವರು ಬೊಕಾರೊದಲ್ಲಿನ ತೋಲೋದಲ್ಲಿರುವ ನೆಹರು ಪ್ರೌಢಶಾಲೆಯಿಂದ  1995 ರಲ್ಲಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು, ಆದರೆ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

"ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಶಿಕ್ಷಣ ಸಚಿವರಾಗಿರುವಾಗ ನನ್ನ ಶೈಕ್ಷಣಿಕ ಅರ್ಹತೆ ಕಡಿಮೆಯಾಗಿರುವ್ದುದು ನನಗೆ ಖೇದ ಉಂಟುಮಾಡುತ್ತು. ನಾನು ಪದವಿ ಶಿಕ್ಷಣ ಪೂರ್ಣಗೊಳಿಸಬೇಕು  ಎಂದುನಿರ್ಧರಿಸಿದ್ದೇನೆ, ಏಕೆಂದರೆ ಕೆಲವರು ಕೇವಲ ಮೆಟ್ರಿಕ್ಯುಲೇಟ್ ಆಗಿರುವ ಸಚಿವರು ರಾಜ್ಯ ಶಿಕ್ಷಣ ಕ್ಷೇತ್ರಕ್ಕೆ ಏನು ಸೇವೆ ಸಲ್ಲಿಸಬಹುದುಎ ಎಂದು ವ್ಯಂಗ್ಯವಾಡುತ್ತಾರೆ," ಸಚಿವರು ಹೇಳಿದ್ದಾರೆ.

"ನಾನು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ ಮತ್ತು ಈಗ, ನಾನು ಈ ರಾಜ್ಯದ ಮಕ್ಕಳಿಗೆ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಮಧ್ಯಂತರ ಕೋರ್ಸ್ ಅನ್ನು ಮುಂದುವರಿಸುತ್ತೇನೆ"  ಸಾರ್ವಜನಿಕರಿಗೆ ಮನವಿ ಮಾಡಿದ ಅವರು,  ಶಿಕ್ಷಣವನ್ನು ಪಡೆಯಲು ಸಾಧ್ಯವಾಗದಿದ್ದರೂ ಸಹ, ಅವರಿಗೆ ಎಲ್ಲಾ ಬೆಂಬಲವನ್ನು ನೀಡಲು ಸರ್ಕಾರ ಸಿದ್ಧರಾಗಿರುವುದರಿಂದ ಮಕ್ಕಳು ಶಿಕ್ಷಣ ಪಡೆಯುವುದನ್ನು  ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಬೊಕಾರೊದ ನವಾಡಿ ದೇವಿ ಮಹತೋ ಇಂಟರ್ ಶಾಲೆಯಲ್ಲಿ ಪ್ರವೇಶ ಪಡೆಯುವುದಾಗಿ ಮಹತೋ ಹೇಳಿದ್ದು 2005 ರಲ್ಲಿ ಮೊದಲ ಬಾರಿಗೆ ಶಾಸಕರಾದ ಒಂದು ವರ್ಷದ ನಂತರ ಈ ಸಂಸ್ಥೆಯನ್ನು ಅವರು ಸ್ಥಾಪಿಸಿದ್ದರು."ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಶಿಕ್ಷಣವನ್ನು ಪಡೆಯಬಹುದು ಏಕೆಂದರೆ ಅದು ಇಚ್ಚಾಶಕ್ತಿಯ ಮೇಲೆ ಅವಲಂಬಿತವಾಗಿದೆ. "

 ಸಂಸ್ಥೆಯಲ್ಲಿ ಪ್ರವೇಶ ಪಡೆಯುವುದು ಕೇವಲ ಸಚಿವರ ಸ್ವಂತ ನಿರ್ಧಾರ, ಏಕೆಂದರೆ ಅವರು ತಮ್ಮ ಅಧ್ಯಯನವನ್ನು ಮತ್ತಷ್ಟು ಮುಂದುವರಿಸಬೇಕೆಂದು ಭಾವಿಸಿದ್ದಾರೆ.ಮಕ್ಕಳ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ಪ್ರತಿ ಲಕ್ಷದಲ್ಲಿ ಕ್ರಮವಾಗಿ ಮೊದಲ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 3 ಲಕ್ಷ, 2 ಲಕ್ಷ ಮತ್ತು 1 ಲಕ್ಷ ಬಹುಮಾನದ ಹಣವನ್ನು ನೀಡಲು ಅವಕಾಶ ಕಲ್ಪಿಸಿದೆ. ಮೂರು ಸ್ಟ್ರೀಮ್‌ಗಳು - ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗಗಳಿಗೆ ಅನ್ವಯವಾಗಲಿದೆ,.

ಜಾರ್ಖಂಡ್‌ನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ದೃಢ ವಿಶ್ವಾಸವಿದೆ.  4416 ಪಂಚಾಯಿತಿಗಳಲ್ಲಿ ಕಾನ್ವೆಂಟ್ ಶಾಲೆಗಳ ಮಾದರಿಯಲ್ಲಿ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಯನ್ನು ಸ್ಥಾಪಿಸಲು ಸೋಮವಾರ ಆದೇಶ ಹೊರಡಿಸಿದೆ ಎಂದು ಸಚಿವರು ಹೇಳಿದರು. ಈ ಶಾಲೆಗಳಲ್ಲಿ ಶಿಕ್ಷಣದಲ್ಲಿ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು.ಶಿಕ್ಷಣ ಸಚಿವರ ಪ್ರಕಾರ, ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ರಾಜ್ಯ ಸರ್ಕಾರ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಜಾರ್ಖಂಡ್‌ನ ಎಲ್ಲಾ ಸರ್ಕಾರಿ ಶಾಲೆಗಳು ದೆಹಲಿಯ ಶಾಲೆಗಳ ಮಾದರಿಯಲ್ಲಿ ಶೀಘ್ರದಲ್ಲೇ ರೂಪಾಂತರಗೊಳ್ಳಲಿವೆ ಎಂದು ಹೇಳಿದರು.

ಸರ್ಕಾರಿ ಶಾಲೆಗಳಿಗೆ ಹೋದ ವಿದ್ಯಾರ್ಥಿಗಳಿಗೆ ಮಾತ್ರ ಸರ್ಕಾರಿ ಉದ್ಯೋಗಗಳನ್ನು ಕಾಯ್ದಿರಿಸುವ ಬಗ್ಗೆ ಸಹ ಸಚಿವರು ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT