ದೇಶ

ಕಾಂಗ್ರೆಸ್ ನಲ್ಲಿರುವ ಭಿನ್ನಾಭಿಪ್ರಾಯವನ್ನು ಕ್ಷಮಿಸಿ ಮುನ್ನಡೆಯಬೇಕು: ಅಶೋಕ್ ಗೆಹ್ಲೋಟ್ 

Srinivas Rao BV

ಜೈಪುರ: ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಏನೇ ಇದ್ದರೂ ಸಹ ಅದನ್ನು ಕ್ಷಮಿಸಿ ಮುನ್ನಡೆಯಬೇಕೆಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. 

ಕಾಂಗ್ರೆಸ್ ನ ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾಧ್ರ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಮನವೊಲಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದು, ರಾಜಸ್ಥಾನದ ಬಿಕ್ಕಟ್ಟು ಶಮನವಾಗಿದೆ. 

ಸಚಿನ್ ಪೈಲಟ್ ಕಾಂಗ್ರೆಸ್ ನ 18 ಶಾಸಕರ ವಿರುದ್ಧ ಬಂಡಾಯ ಸಾರಿದ್ದರಿಂದ ರಾಜಸ್ಥಾನ ಸರ್ಕಾರ ಅಸ್ಥಿರವಾಗಿತ್ತು. 

ಈ ಬೆಳವಣಿಗೆಗಳ ನಂತರ ರಾಜಸ್ಥಾನ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನದಿಂದ ಹಾಗೂ ಉಪಮುಖ್ಯಮಂತ್ರಿ ಹುದ್ದೆಯಿಂದ ಪೈಲಟ್ ಅವರನ್ನು ವಜಾಗೊಳಿಸಲಾಗಿತ್ತು.

ಈಗ ಭಿನ್ನಮತ ಶಮನವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಶೋಕ್ ಗೆಹ್ಲೋಟ್, ದೇಶ, ಜನಗಳ ಹಿತಾಸಕ್ತಿಯ ದೃಷ್ಟಿಯಿಂದ ಭಿನ್ನಮತ ಏನೇ ಇದ್ದರೂ ಸಹ ಅದನ್ನು ಮರೆತು, ಕ್ಷಮಿಸಿ ಮುನ್ನಡೆಯಬೇಕೆಂದು ಹೇಳಿದ್ದಾರೆ. 

SCROLL FOR NEXT