ದೇಶ

ರಕ್ಷಣೆಗಾಗಿ ಬಲಿಷ್ಠ ಸೈನಿಕನನ್ನು ಗಡಿಗೆ ಕಳಿಸುತ್ತಾರೆ: ಬದಲಾದ ಆಸನದ ಕುರಿತು 'ರೆಬೆಲ್' ಕೈ ನಾಯಕ ಸಚಿನ್ ಪೈಲಟ್ ಸ್ವಾರಸ್ಯಕರ ಹೇಳಿಕೆ

Nagaraja AB

ಜೈಪುರ: ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಕಾಂಗ್ರೆಸ್ ಬಂಡಾಯಗಾರ ಸಚಿನ್ ಪೈಲಟ್ ಅವರಿಗೆ ಬದಲಾದ ಆಸನವು ಚರ್ಚೆಯ ವಿಷಯವಾಯಿತು.

ರಾಜಸ್ಥಾನ ರಾಜಕಾರಣದಲ್ಲಿ ಗುರುವಾರ ಕ್ಷಿಪ್ರಗತಿಯಲ್ಲಿ ಆದ ಬೆಳವಣಿಗೆಯ ನಂತರ ಕಾಂಗ್ರೆಸ್  ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಸಚಿನ್ ಪೈಲಟ್ ಭೇಟಿಯಾಗಿದ್ದರು.

ಆದರೆ, ಆಸನ ಬದಲಾದ ಬಗ್ಗೆ ಪ್ರತಿಕ್ರಿಯಿಸಿದ ಸಚಿನ್ ಪೈಲಟ್,  ನನಗೆ ಇಲ್ಲಿ ಆಸನ ನೀಡಿದ್ದು ನೋಡಿ ಅಶ್ಚರ್ಯವಾಯಿತು. ಎರಡು ನಿಮಿಷ ಯೋಜಿಸಿದ ಬಳಿಕ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ನನ್ನ ಆಸನವಿದೆ. ಇದು ಒಂದು ರೀತಿಯಲ್ಲಿ ಬಾರ್ಡರ್ ಇದ್ದಂತೆ. ಧೈರ್ಯ ಶಾಲಿ ಯೋಧರನ್ನು ಮಾತ್ರ ಕಳುಹಿಸಲಾಗುತ್ತದೆ ಎಂದು ಗೊತ್ತಾಯಿತು ಎಂದು ಹೇಳಿದರು.

ನಾನಾಗಲೀ  ಅಥವಾ ನನ್ನ ಯಾವುದೇ ಸ್ನೇಹಿತನಾಗಿರಲಿ, ನಾವು ವೈದ್ಯರನ್ನು ಸಂಪರ್ಕಿಸಿದ್ದು, ಸರಿಯಾದ ಚಿಕಿತ್ಸೆ ಬಳಿಕ ಎಲ್ಲಾ 125 ಶಾಸಕರು ಸದನದಲ್ಲಿ ಇರಲಿದ್ದೇವೆ. ಗಡಿಯಲ್ಲಿ ಬಾಂಬ್ ಸ್ಪೋಟವಾಗಬಹುದು ಆದರೆ, ನಾವು ರಕ್ಷಕವಚವಾಗಿ ಇರುತ್ತೇವೆ. ಎಲ್ಲವನ್ನು ಸುರಕ್ಷಿತವಾಗಿ ಇಡಲಿದ್ದೇವೆ ಎಂದು ಸಚಿನ್ ಪೈಲಟ್ ಹೇಳಿದರು.

ಇದು ಸತ್ಯಕ್ಕೆ ದೊರೆತ ಜಯವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಒಂದು ತಿಂಗಳ ರಾಜಕೀಯ ಬಿಕ್ಕಟ್ಟಿನ ನಂತರ ವಿಶೇಷ ಅಧಿವೇಶನ ನಡೆಯುತ್ತಿದೆ.

SCROLL FOR NEXT