ದೇಶ

74ನೇ ಸ್ವಾತಂತ್ರ್ಯ ಸಂಭ್ರಮ: ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

Manjula VN

ನವದೆಹಲಿ: 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. 

ಇಂದು ಬೆಳಿಗ್ಗೆ 7.18ರ ಸುಮಾರಿಗೆ ಕೆಂಪುಕೋಟೆಗೆ ಆಗಮಿಸಿದ ಪ್ರಧಾನಮಂತ್ರಿ ನರಂದ್ರ ಮೋದಿಯವರನ್ನು,  ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಕಾರ್ಯದರ್ಶಿ ಡಾ.ಅಜಯ್ ಕುಮಾರ್, ಲೆಫ್ಟಿನೆಂಟ್ ಜನರಲ್ ವಿಜಯ್ ಕುಮಾರ್ ಮಿಶ್ರಾ ಅವರು ಸ್ವಾಗತಿಸಿದರು, 

ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರು ರಕ್ಷಣಾ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು. ಇದೀಗ ಧ್ವಜಾರೋಹಣ ನೆರವೇರಿಸಿದ ಅವರು, ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 

ಕೊರೋನಾ ಹಿನ್ನೆಲೆಯಲ್ಲಿ 4000 ಜನಕ್ಕೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಬಾರಿ ದೇಶವು ಕೊರೊರೋನಾ ವೈರಸ್ ಭೀತಿ ಹಾಗೂ ಆರ್ಥಿಕ ಮಂದಗತಿ ಎದುರಿಸುತ್ತಿರುವ ಕಾರಣ ಮೋದಿ ಯಾವು ಮಾತುಗಳನ್ನಾಡಲಿದ್ದಾರೆಂಬುದು ಮಹತ್ವ ಪಡೆದುಕೊಂಡಿದೆ. 

SCROLL FOR NEXT