ದೇಶ

ಬಿಹಾರ: ಕೈಗಾರಿಕಾ ಸಚಿವ ಶ್ಯಾಮ್ ರಜಾಕ್ ಜೆಡಿಯುನಿಂದ ಉಚ್ಛಾಟನೆ

Shilpa D

ಪಾಟ್ನಾ: ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಹಿರಿಯ ಮುಖಂಡ ಹಾೂ ಕೈಗಾರಿಕಾ ಸಚಿವ ಶ್ಯಾಮ್ ರಜಾಕ್ ಅವರನ್ನು ಭಾನುವಾರ ಜೆಡಿಯು ನಿಂದ ಉಚ್ಛಾಟಿಸಲಾಗಿದೆ, 

ಜೆಡಿಯು ತೊರೆದು ಆರ್‌ಜೆಡಿ ಸೇರುವ ಸಿದ್ಧತೆಯಲ್ಲಿದ್ದ ಬಿಹಾರದ ಕೈಗಾರಿಕೆ ಸಚಿವ ಶ್ಯಾಮ್‌ ರಜಾಕ್‌ ಅವರನ್ನು ಭಾನುವಾರ ಸಚಿವ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಶ್ಯಾಮ್‌ ಅವರು ಸೋಮವಾರ ಬೆಳಗ್ಗೆ 10.30ಕ್ಕೆ ರಾಜೀನಾಮೆ ನೀಡಿ, 11.30ಕ್ಕೆ ರಾಷ್ಟ್ರೀಯ ಜನತಾದಳ ಸೇರುವವರಿದ್ದರು.

ಸಿಎಂ ನಿತೀಶ್ ಕುಮಾರ್ ನಿರ್ದೇಶನದಂತೆ ರಾಜ್ಯ ಜೆಡಿಯು ಅಧ್ಯಕ್ಷ ವಶಿಷ್ಟ ನಾರಾಯಣ ಅವರು ರಜಾಕ್ ಅವರನ್ನು ಉಚ್ಚಾಟನೆಗೊಳಿಸಿದ್ದಾರೆ, ನಂತರ ರಾಜಕ್ ಅವರನ್ನು ಸಂಪುಂಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ನಿತೀಶ್ ಕುಮಾರ್ ಶಿಫಾರಸ್ಸು ಮಾಡಿದ್ದರು.

2009 ರಲ್ಲಿ ಶ್ಯಾಮ್ ರಜಾಕ್ ಜೆಡಿಯು ಸೇರಿದ್ದರು.  ಲಾಲೂ ಪ್ರಸಾದ್ ಯಾದವ್ ಅವರ ಆಪ್ತರಾಗಿದ್ದ ರಜಾಕ್ ಅವರಿಗೆ ಶೋಕಾಸ್ ನೋಟೀಸ್ ನೀಡದೆ ಉಚ್ಚಾಟಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಹಾರ ವಿಧಾನ ಸಭೆ ಚುನಾವಣೆ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ

SCROLL FOR NEXT