ದೇಶ

1000 ಕೋಟಿ ಹವಾಲ ಪ್ರಕರಣ: ಚೀನಾದ ಚಾರ್ಲಿ ಪೆಂಗ್ ವಿರುದ್ಧ ಜಾರಿ ನಿರ್ದೇಶನಾಲಯದಿಂದ ಪಿಎಂಎಲ್ಎ ಪ್ರಕರಣ

Srinivas Rao BV

ನವದೆಹಲಿ: ಚೀನಾದ ಪ್ರಜೆ ಚಾರ್ಲಿ ಪೆಂಗ್ ವಿರುದ್ಧ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. 

ಸೆ.13, 2018 ರಲ್ಲಿ ದೆಹಲಿ ಪೊಲೀಸರು ಈತನ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಜಾರಿ ನಿರ್ದೇಶನಾಲಯ ಚಾರ್ಲಿ ಪೆಂಗ್ ವಿರುದ್ಧ  1000 ಕೋಟಿ ರೂಪಾಯಿ ಹವಾಲ ಪ್ರಕರಣ ದಾಖಲಿಸಿದೆ. 

ಚಾರ್ಲಿ ಪೆಂಗೋ ನನ್ನು ಆದಾಯ ತೆರಿಗೆ ಅಧಿಕಾರಿಗಳು ಸಹ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾರಂಭದಲ್ಲಿ ಈತನನ್ನು ದಲೈ ಲಾಮ ಅವರ ವಿರುದ್ಧ ಬೇಹುಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿಸಲಾಗಿತ್ತು. ನಂತರದ ದಿನಗಳಲ್ಲಿ ಫೋರ್ಜರಿ ಹಾಗೂ ಪಾಸ್ಪೋರ್ಟ್ ಕಾಯ್ದೆಯಡಿ ಬಂಧಿಸಲಾಗಿತ್ತು. 

ಈತ ನಕಲಿ ಪಾಸ್ಪೋರ್ಟ್ ಹೊಂದಿದ್ದು ಪೊಲೀಸರ ಗಮಕ್ಕೆ ಬಂದಿತ್ತು. ಈ ವ್ಯಕ್ತಿಯನ್ನು 2019 ರ ಜೂ.06 ರಂದು ಜಾಮೀನಿನ ಆಧಾರದಲ್ಲಿ ಬಿಡುಗಡೆ ಮಾಡಿ ಚಾರ್ಜ್ ಶೀಟ್ ದಾಖಲಿಸಲಾಗಿತ್ತು. 

ಚಾರ್ಲಿ ಪೆಂಗ್ ಹಾಗೂ ಇನ್ನಿತರ ಚೀನಾ ದೇಶದ ಪ್ರಜೆಗಳು ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಎಗಳ ಸಹಕಾರದಿಂದಾಗಿ 40 ಬ್ಯಾಂಕ್ ಖಾತೆಗಳನ್ನು ತೆರೆದು ನಿಷ್ಕ್ರಿಯ, ಕೇವಲ ಹೆಸರಿಗಷ್ಟೇ ಕಂಪನಿಗಳನ್ನು ನಡೆಸುತ್ತಿದ್ದರು. 

SCROLL FOR NEXT