ದೇಶ

ಪಕ್ಷಪಾತ ಆರೋಪ: ಯಾವುದೇ ರಾಜಕೀಯ ಪಕ್ಷ, ಯಾವುದೇ ಸ್ಥಾನದಲ್ಲಿದ್ದರೂ ಹಿಂಸಾಚಾರ ಪ್ರಚೋದಿಸುವ ವಿಚಾರವನ್ನು ನಿಷೇಧಿಸುತ್ತೇವೆ- ಫೇಸ್'ಬುಕ್ ಸ್ಪಷ್ಟನೆ

Manjula VN

ನವದೆಹಲಿ: ಯಾವುದೇ ರಾಜಕೀಯ ಪಕ್ಷವಾದರೂ, ಆ ಪಕ್ಷ ಯಾವುದೇ ಸ್ಥಾನದಲ್ಲಿದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಮಾತುಗಳು ಹಾಗೂ ವಿಷಯಗಳನ್ನು ನಾವು ನಿಷೇಧಿಸುದ್ದೇವೆ. ಈ ನೀತಿ ಇಡೀ ವಿಶ್ವದಲ್ಲಿ ಜಾರಿಯಲ್ಲಿದೆ ಎಂದು ತನ್ನ ವಿರುದ್ಧ ಕೇಳಿ ಬಂದಿರುವ ಪಕ್ಷಪಾತ ಆರೋಪ ಕುರಿತು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ ಫೇಸ್'ಬುಕ್ ಸ್ಪಷ್ಟನೆ ನೀಡಿದೆ. 

‘ದ್ವೇಷ ಭಾಷಣ ನಿಯಮಗಳನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕಾರಣಿ ಮತ್ತು ಇತರ ಹಿಂದೂ ರಾಷ್ಟ್ರೀಯವಾದಿ ವ್ಯಕ್ತಿಗಳು ಮತ್ತು ಗುಂಪುಗಳಿಗೆ ಅನ್ವಯಿಸುವುದನ್ನು ಫೇಸ್‌ಬುಕ್‌ ನಿಲ್ಲಿಸಿದೆ ಎಂದು ಹೇಳಿದ್ದ ಭಾರತದ ಹಿರಿಯ ಅಧಿಕಾರಿಯೊಬ್ಬರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಂತೆ ಬಿಜೆಪಿ ನಾಯಕರ ದ್ವೇಷ ಭಾಷಣಗಳನ್ನು ಫೇಸ್‌ಬುಕ್‌ ನಿರ್ಲಕ್ಷಿಸುತ್ತಿದೆ ಎಂದು ಅಮೆರಿಕದ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿತ್ತು. 

ಈ ಲೇಖನವನ್ನು ಉಲ್ಲೇಖಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಫೇಸ್'ಬುಕ್ ಮತ್ತು ವಾಟ್ಸ್'ಆ್ಯಪ್ ಗಳನ್ನು ಭಾರತದಲ್ಲಿ ಬಿಜೆಪಿ ಮತ್ತು ಆರ್'ಎಸ್ಎಸ್ ನಿಯಂತ್ರಿಸುತ್ತಿವೆ. ಈ ಜಾಲತಾಣಗಳನ್ನು ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುತ್ತಿವೆ. ಅಮೆರಿಕಾದ ಮಾಧ್ಯಮಗಳು ಕೊನೆಗೂ ಫೇಸ್'ಬುಕ್'ನ ಬಗ್ಗೆ ಸತ್ಯ ಹೊರಗೆಡವಿವೆ ಎಂದು ಟ್ವೀಟ್ ಮಾಡಿದ್ದರು. 

ಬಳಿಕ ಕಾಂಗ್ರೆಸ್ ನಾಯಕರಾದ ಅಜಕ್ ಮಾಕನ್, ಪಿ.ಚಿದಂಬರೇ, ಶಶಿ ತರೂರ್, ರಣದೀಪ್ ಸಿಂಗ್ ಸುರ್ಜೇವಾಲಾ ಮುಂತಾದವರೂ ಈ ಕುರಿತು ಬಿಜೆಪಿ ವಿರುದ್ಧ ಆರೋಪ ಮಾಡಿದ್ದರು. 

ಪಕ್ಷಪಾತ ಆರೋಪಗಳು ಕೇಲಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಫೇಸ್ಬುಕ್ ವಕ್ತಾರ, ಯಾವುದೇ ಪಕ್ಷ, ಯಾವುದೇ ರಾಜಕೀಯ ಸ್ಥಾನದಲ್ಲಿದ್ದರೂ, ಯಾವುದೇ ಸಂಬಂಧ ಇದ್ದರೂ ಕೂಡ ಹಿಂಸಾಚಾರ ಪ್ರಚೋದಿಸುವ ದ್ವೇಷದ ಭಾಷಣ, ಮಾತು ಹಾಗೂ ವಿಚಾರಗಳನ್ನು ನಾವು ನಿಷೇಧಿಸುತ್ತೇವೆ. ಈ ನೀತಿಗಳನ್ನು ಜಾಗತಿಕವಾಗಿ ಜಾರಿಗೊಳಿಸುತ್ತವೆ. ಈ ಕುರಿತು ಮತ್ತಷ್ಟು ಕೆಲಸಗಳು ಮಾಡುವ ಬಗ್ಗೆ ನಮಗೆ ತಿಳಿದಿದ್ದು, ಈ ಕುರಿತ ಕಾರ್ಯದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ನ್ಯಾಯಸಮ್ಮತತೆ, ನಿಖರತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಪ್ರಕ್ರಿಯೆಯ ನಿಯಮಿತ ಲೆಕ್ಕಪರಿಶೋಧನೆಗಳನ್ನು ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 

SCROLL FOR NEXT