ಸಾಂದರ್ಭಿಕ ಚಿತ್ರ 
ದೇಶ

ಬಾರಾಮುಲ್ಲಾ ಎನ್ ಕೌಂಟರ್: ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದ ಸೇನೆ!

ಬಾರಾಮುಲ್ಲಾದಲ್ಲಿ ನಡೆದ ಎನ್ಕೌಂಟರ್​​ನಲ್ಲಿ ಉಗ್ರರ ದಾಳಿಗೆ ಸಿಆರ್​ಪಿಎಫ್​ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್​ ಹುತಾತ್ಮರಾದ ಬೆನ್ನಲ್ಲೇ ಸೇನೆ ಇದೀಗ ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದೆ.

ಶ್ರೀನಗರ: ಬಾರಾಮುಲ್ಲಾದಲ್ಲಿ ನಡೆದ ಎನ್ಕೌಂಟರ್​​ನಲ್ಲಿ ಉಗ್ರರ ದಾಳಿಗೆ ಸಿಆರ್​ಪಿಎಫ್​ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್​ ಹುತಾತ್ಮರಾದ ಬೆನ್ನಲ್ಲೇ ಸೇನೆ ಇದೀಗ ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದೆ.

ಸೇನಾ ಮೂಲಗಳ ಪ್ರಕಾರ ಎನ್ ಕೌಂಟರ್ ನಲ್ಲಿ ಭಾರತೀಯ ಯೋಧರು ಲಷ್ಕರ್​ ಎ ತೊಯ್ಬಾದ ಉನ್ನತ ಕಮಾಂಡರ್​ ಸಜ್ಜಾದ್​​ನನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಜಮ್ಮುಕಾಶ್ಮೀರದ ಐಜಿ ವಿಜಯ್​ಕುಮಾರ್​ ಅವರು ಮಾಹಿತಿ ನೀಡಿದ್ದು, ಲಷ್ಕರ್​ ಎ ತೊಯ್ಬಾದ ಸಜ್ಜಾದ್​ ಅಲಿಯಾಸ್​ ಹೈದರ್​​ನನ್ನು ಹತ್ಯೆ ಮಾಡಲಾಗಿದೆ. ಇದು ಭದ್ರತಾ ಪಡೆ ಮತ್ತು ಪೊಲೀಸರ ಮಹತ್ವದ ಸಾಧನೆ ಎಂದು ಹೇಳಿದ್ದಾರೆ. 

ಸಜ್ಜದ್​ ಹಾಗೂ ಇನ್ನೋರ್ವ ಉಗ್ರನನ್ನು ಹತ್ಯೆ ಮಾಡಲಾಗಿದ್ದು, ಮೃತರ ಬಳಿ ಇದ್ದ ಒಂದು ಎಕೆ-47 ರೈಫಲ್​ ಮತ್ತು ಎರಡು ಪಿಸ್ತೂಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಉಗ್ರನಿಗಾಗಿ ಹುಡುಕಾಟ ನಡೆದಿದೆ ಎಂದು ಸಿಆರ್​ಪಿಎಫ್ ತಿಳಿಸಿದೆ. ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೂ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್​ಕೌಂಟರ್​ ನಡೆಯುತ್ತಿದೆ. ಉಗ್ರರ ದಾಳಿಗೆ ಸಿಆರ್​ಪಿಎಫ್​ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್​ ಹುತಾತ್ಮರಾಗಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT