ದೇಶ

ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ತಪ್ಪಿತು ಭಾರಿ ಅನಾಹುತ; ಉಗ್ರರ ಯೋಜನೆ ತಲೆಕೆಳಗೆ!

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಸಿಆರ್ ಪಿಎಫ್ ಮೇಲೆ ದಾಳಿ ನಡೆದ ಸುದ್ದಿ ಬರುತ್ತಿದ್ದಂತೆಯೇ ಇತ್ತ ಪುಲ್ವಾಮದಲ್ಲಿ ಉಗ್ರರ ಭಾರಿ ಸಂಚೊಂದನ್ನು ಸಮಯೋಚಿತ ನಡೆಯಿಂದ ವಿಫಲಗೊಳಿಸಲಾಗಿದೆ. 

ಕಳೆದ ಬಾರಿ ಪುಲ್ವಾಮದಲ್ಲಿ ನಡೆಸಿದ್ದ ದಾಳಿಯ ಮಾದರಿಯಲ್ಲೇ ಮತ್ತೊಂದು ಭೀಕರ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು. ಆದರೆ ಭದ್ರತಾ ಪಡೆಗಳು ಈ ಸಂಚನ್ನು ವಿಫಲಗೊಳಿಸಿ ನಡೆಯಲಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. 

ಪುಲ್ವಾಮಾ ಜಿಲ್ಲೆಯ ತುಜಾನ್​ ಗ್ರಾಮದ ಸೇತುವೆಯ ಅಡಿಯಲ್ಲಿ ಉಗ್ರರು ಇರಿಸಿದ್ದ ಆಧುನಿಕ ಸ್ಫೋಟಕವನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. 

ಐಜಿಪಿ ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು " ಭಾರತೀಯ ಸೇನಾ ಸಿಬ್ಬಂದಿ ಈ ಸೇತುವೆಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಸೇತುವೆ ಕೆಳಗೆ ಉಗ್ರರು ಸುಧಾರಿತ ಸ್ಫೋಟ ಸಾಧನಗಳನ್ನು ಇರಿಸಿದ್ದರು ಎಂದು ತಿಳಿಸಿದ್ದಾರೆ. 

4ಜಿ ಮೊಬೈಲ್ ಡಾಟಾ ಸೇವೆ ಆರಂಭ 

ಕಾಶ್ಮೀರದ ಮಧ್ಯ ಭಾಗದಲ್ಲಿರುವ ಗಂದರ್​ಬಾಲ್​ನಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಗ್ರಾಹಕರಿಗೆ 4ಜಿ ಸೇವೆಯನ್ನು ಮುಕ್ತಗೊಳಿಸಲಾಗಿದೆ. ಉಳಿದ ಭಾಗದಲ್ಲಿ 2ಜಿ ಸೇವೆ ಮುಂದುವರಿಯಲಿದೆ.

SCROLL FOR NEXT