ದೇಶ

ವಿಶ್ವಪ್ರಸಿದ್ದ ಶಾಸ್ತ್ರೀಯ ಸಂಗೀತಗಾರ ಪಂಡಿತ್ ಜಸ್​ರಾಜ್ ಇನ್ನಿಲ್ಲ

Raghavendra Adiga

ವಿಶ್ವವಿಖ್ಯಾತ ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕ  ಪಂಡಿತ್ ಜಸ್​ರಾಜ್ ಅಮೆರಿಕದ ನ್ಯೂ ಜರ್ಸಿಯಲ್ಲಿ ಸೋಮವಾರ ನಿಧನರಾದರು. ಈ ವರ್ಷದ ಜನವರಿಯಲ್ಲಿ ಅವರಿಗೆ 90 ವರ್ಷ ತುಂಬಿತ್ತು.

80 ವರ್ಷಗಳ ಕಾಲ ಸಂಗೀತ ವೃತ್ತಿಜೀವನ ನಡೆಸಿದ್ದ ಅವರಿಗೆ ಪದ್ಮಶ್ರೀ(1975 ), ಪದ್ಮಭೂಷಣ(1990  ) ಹಾಗೂ ಪದ್ಮವಿಭೂಷಣ(2000 ),  ಸಂಗೀತ ನಾಟಕ ಅಕಾಡೆಮಿಪ್ರಶಸ್ತಿ (1987), .1997-98ರಲ್ಲಿ ಕಾಳಿದಾಸ ಸಮ್ಮಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಮತ್ತು ಗೌರವಗಳು ಸಂದಿದ್ದವು. 

ಹರಿಯಾಣದ ಹಿಸ್ಸಾರ್ ನವರಾದ ಜಸ್​ರಾಜ್  ಜೈಪುರ ಅತ್ರೌಲಿ ಘರಾನಾದ 83 ವರ್ಷದ ಕಿಶೋರಿ ಅಮೋಂಕರ್ ಅವರನ್ನೊಳಗೊಂಡ ಶಾಸ್ತ್ರೀಯ ಗಾಯಕರ ಕೊನೆಯ ಪೀಳಿಗೆಯವರಾಗಿದ್ದ ಜಸರಾಜ್  ಮೇವಾಟಿ ಘರಾಣದ ಅದ್ವರ್ಯುರಾಗಿದ್ದರು. ಅವರನ್ನು ಅವರ ತಂದೆ ಸಂಗೀತ ಜಗತ್ತಿಗೆ ಪರಿಚಯಿಸಿದ್ದರು,   ನಂತರ ಅವರ ಹಿರಿಯ ಸಹೋದರ ಪಂಡಿತ್ ಪ್ರತಾಪ್ ನಾರಾಯಣ್ ಅವರ ಸಹಾಯದಿಂದ ತಬಲಾ ಜೊತೆಗಾರರಾಗಿ ತರಬೇತಿ ಪಡೆದರು.

ಜಸ್​ರಾಜ್ 14 ನೇ ವಯಸ್ಸಿನಲ್ಲಿ ಗಾಯಕರಾಗಿ ತರಬೇತಿಯನ್ನು ಪ್ರಾರಂಭಿಸಿದರು, ಮತ್ತು ಅವರ ರಿಯಾಜ್ ಒಮ್ಮೆ ದಿನಕ್ಕೆ 14 ಗಂಟೆಗಳ ಕಾಲವಿರುತ್ತಿತ್ತು. 

ಇವರ ಶಿಷ್ಯರಲ್ಲಿ ಸಂಜೀವ ಅಭ್ಯಂಕರ್, ಹಿಂದಿ ಚಿತ್ರರಂಗದ ಸಾಧನಾ ಸರ್ ಗಮ್ ಮುಂತಾದವರು ಪ್ರಮುಖರಾಗಿದ್ದಾರೆ.

ಪ್ರಧಾನಿ ಮೋದಿ ಸಂತಾಪ

ಪಂಡಿತ್ ಜಸ್​ರಾಜ್ ಅಚರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ. 

SCROLL FOR NEXT