ದೇಶ

ಶಾಹೀನ್ ಭಾಗ್ ಪ್ರತಿಭಟನಾಕಾರ ಬಿಜೆಪಿ ಸೇರ್ಪಡೆ!

Srinivas Rao BV

ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಸಿಎಎ ಕಾಯ್ದೆಯನ್ನು ವಿರೋಧಿಸಿ ಶಾಹಿನ್ ಭಾಗ್ ನಲ್ಲಿ ಪ್ರತಿಭಟಿಸಿದ್ದ ವ್ಯಕ್ತಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿ ಸೇರಿದ್ದಾರೆ. 

ಸಾಮಾಜಿಕ ಕಾರ್ಯಕರ್ತ ಶಾಝಾದ್ ಅಲಿ ಸಿಎಎ ವಿರೊಧಿಸಿ, ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದವರ ಪೈಕಿ ಒಬ್ಬರಾಗಿದ್ದಾರೆ. 

ಬಿಜೆಪಿ ಸೇರಿರುವ ಬಗ್ಗೆ ಮಾತನಾಡಿರುವ ಅಲಿ, ಬಿಜೆಪಿ ಮುಸ್ಲಿಮ್ ಸಮುದಾಯದ ವಿರೋಧಿ ಪಕ್ಷವಲ್ಲ ಎಂಬುದನ್ನು ಸಾಬೀತುಪಡಿಸಲು ತಾವು ಈ ಪಕ್ಷ ಸೇರಿರುವುದಾಗಿ ತಿಳಿಸಿದ್ದಾರೆ. 

ಸಿಎಎಗೆ ಸಂಬಂಧಿಸಿದಂತೆ ನಾವು ಬಿಜೆಪಿ ಜೊತೆಯಲ್ಲೇ ಕುಳಿತು ಸಿಎಎ ಕುರಿತ ಆತಂಕಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ದೆಹಲಿಯ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ಹಾಗೂ ಬಿಜೆಪಿ ನಾಯಕ ಶ್ಯಾಮ್ ಜಾಜು ಅವರ ನೇತೃತ್ವದಲ್ಲಿ ಅಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಡಿ.15 ರಿಂದ ಶಾಹೀನ್ ಭಾಗ್ ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿತ್ತು.

SCROLL FOR NEXT