ದೇಶ

ಕೋವಿಡ್-19: ಪಂಜಾಬ್ ನಲ್ಲಿ ವೀಕೆಂಡ್ ಲಾಕ್ಡೌನ್, ರಾತ್ರಿ ಕರ್ಫ್ಯೂ ವಿಸ್ತರಣೆ!

Srinivasamurthy VN

ಚಂಡೀಘಡ್: ಮಾರಕ ಕೊರೋನಾ ವೈರಸ್ ತಡೆ ವಿಚಾರವಾಗಿ ಪಂಜಾಬ್ ಸರ್ಕಾರ ವೀಕೆಂಡ್ ಲಾಕ್ಡೌನ್ ಮತ್ತು ರಾತ್ರಿ ಕರ್ಫ್ಯೂ ವಿಸ್ತರಣೆ ಮಾಡಿದೆ.

ಈ ಬಗ್ಗೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸರಣಿ ಆದೇಶ ನೀಡಿದ್ದು, ವೀಕೆಂಡ್ ಲಾಕ್ ಡೌನ್ ಮತ್ತು ಸಂಜೆ 7 ರಿಂದ ಮುಂಜಾನೆ 5ರವರೆಗಿನ ರಾತ್ರಿ ಕರ್ಫ್ಯೂವನ್ನು ವಿಸ್ತರಿಸಿದ್ದಾರೆ. ಅಲ್ಲದೆ ಮದುವೆ, ಸಾವು ಹೊರತು ಪಡಿಸಿ ಉಳಿದೆಲ್ಲ ರೀತಿಯ ಜನ ಸೇರುವ ಕಾರ್ಯಕ್ರಮಗಳಿಗೆ ಆಗಸ್ಟ್ 31ರ  ವರೆಗೂ ನಿಷೇಧ ಹೇರಿದ್ದಾರೆ. ಅಲ್ಲದೆ ಎಲ್ಲ ಖಾಸಗಿ ಕಂಪನಿಗಳಲ್ಲಿ ಶೇ.50ರಷ್ಟು ಉದ್ಯೋಗಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

ಪಂಜಾಬ್ ನಲ್ಲಿ ಶೇ.27.7 ಮಂದಿಯಲ್ಲಿ ಆ್ಯಂಟಿ ಬಾಡಿ ಪತ್ತೆ
ಇನ್ನು ಪಂಜಾಬ್ ನಲ್ಲಿ ನಡೆಸಲಾಗಿರುವ ಸೆರೋ ಸರ್ವೆಯಲ್ಲಿ ರಾಜ್ಯದ ಕಂಟೈನ್ ಮೆಂಟ್ ಝೋನ್ ಗಳಲ್ಲಿನ ಶೇ.27.7 ಮಂದಿಯಲ್ಲಿ ಆ್ಯಂಟಿ ಬಾಡಿ ಪತ್ತೆಯಾಗಿದೆ. ಇದು ಈ ಪ್ರದೇಶದಲ್ಲಿ ಮೊದಲೇ ಕೊರೋನಾ ವೈರಸ್ ವ್ಯಾಪಿಸಿ ಗುಣವಾಗಿರುವುದನ್ನು ತಿಳಿಸುತ್ತಿದೆ.

SCROLL FOR NEXT