ದೇಶ

ಕೋವಿಡ್-19: ನಿನ್ನೆ ಒಂದೇ ದಿನ ಅತ್ಯಂತ ಹೆಚ್ಚಿನ 62,282 ಸೋಂಕಿತರು ಗುಣಮುಖ, 29 ಲಕ್ಷ ಗಡಿ ದಾಟಿದ ಪ್ರಕರಣಗಳು

Nagaraja AB

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 68 ಸಾವಿರದ 898 ಹೊಸ ಪ್ರಕರಣಗಳೊಂದಿಗೆ ಕೋವಿಡ್-19 ಪ್ರಕರಣಗಳ
ಸಂಖ್ಯೆ 29 ಲಕ್ಷ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ. ದೇಶದಲ್ಲಿ ಈಗ ಒಟ್ಟಾರೇ  29 ಲಕ್ಷದ 05 ಸಾವಿರದ 824 ಪ್ರಕರಣಗಳು ಕಂಡುಬಂದಿವೆ.

ನಿನ್ನೆ ಒಂದೇ ದಿನ ಅತ್ಯಂತ ಹೆಚ್ಚಿನ 62, 282 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.ಈ ಮೂಲಕ ಒಟ್ಟಾರೇ ಗುಣಮುಖರಾದವರ ಸಂಖ್ಯೆ 21 ಲಕ್ಷದ 58 ಸಾವಿರದ 946 ಆಗಿದೆ ಎಂದು  ಆರೋಗ್ಯ ಸಚಿವಾಲಯ ತಿಳಿಸಿದೆ.

6,92,028 ಸಕ್ರಿಯ ಪ್ರಕರಣಗಳಿದ್ದು, 21, 58,947 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 983 ಸೋಂಕಿತರು ಮೃತಪಡುವುದರೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 54, 849 ಆಗಿದೆ.

SCROLL FOR NEXT