ದೇಶ

ಕೋವಿಡ್-19: ದೇಶದಲ್ಲಿ 24 ಗಂಟೆಗಳಲ್ಲಿ 8 ಲಕ್ಷಕ್ಕೂ ಕೊರೋನಾ ಪರೀಕ್ಷೆ: ಐಸಿಎಂಆರ್

Srinivasamurthy VN

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 8 ಲಕ್ಷಕ್ಕೂ ಅಧಿಕ ಕೊರೋನಾ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮಾಹಿತಿ ನೀಡಿದೆ. 

ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ ಆಗಸ್ಚ್ 20 ಗುರುವಾರದಂದು ದೇಶಾದ್ಯಂತ 1504 ಲ್ಯಾಂಬ್ ಗಳಲ್ಲಿ 8,05,985 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದೆ. ಈ ಪೈಕಿ 978 ಸರ್ಕಾರಿ ಲ್ಯಾಬ್ ಗಳಿದ್ದು, 526 ಖಾಸಗಿ ಲ್ಯಾಬ್ ಗಳಿವೆ.

ನಿನ್ನೆ 8,05,985 ಲಕ್ಷ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಆ ಮೂಲಕ ದೇಶದಲ್ಲಿ ಈ ವರೆಗೂ 3,34,67,237 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.

ಇನ್ನು ಕೊರೋನಾ ಮಟ್ಟಹಾಕಲು "ಟೆಸ್ಟ್, ಟ್ರ್ಯಾಕ್ ಮತ್ತು ಟ್ರೀಟ್" ತಂತ್ರವನ್ನು ಅನುಸರಿಸುತ್ತಿರುವ ಭಾರತವು, ಇದರ ಅನುಸಾರವಾಗಿ, ದಿನಕ್ಕೆ 10 ಲಕ್ಷ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಗಳನ್ನು ನಡೆಸುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚು ದಾಖಲಾಗುತ್ತಿರುವ ನಡುವಲ್ಲೂ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಕೂಡ  ಹೆಚ್ಚಾಗುತ್ತಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಪೈಕಿ ಶೇ.74.43ರಷ್ಟು ಅಂದರೆ 2,158,946 ಸೋಂಕಿತರು ಸೋಂಕಿನಿಂದ ಗುಣಮುಖರಾಗಿದ್ದು, ಶೇ.21.81ರಷ್ಟು ಅಂದರೆ 692,028 ಸೋಂಕಿತರು (ಸಕ್ರಿಯ ಪ್ರಕರಣಗಳು)ದೇಶದ ವಿವಿಧೆಡೆ ಚಿಕಿತ್ಸೆ ಪಡೆಯತ್ತಿದ್ದಾರೆ.

SCROLL FOR NEXT