ದೇಶ

ಗಣೇಶ ಚತುರ್ಥಿ: ದೇಶದ ಜನತೆಗೆ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

Raghavendra Adiga

ನವದೆಹಲಿ:  ಹಿಂದೂ ಧರ್ಮದ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಹಬ್ಬವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಗಣೇಶ ಚತುರ್ಥಿ ಹಬ್ಬದ ಪ್ರಮುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಜನತೆಗೆ ಶುಭಾಶಯ ಕೋರಿದ್ದಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರಲ್ಲಿ ಸಂತೋಷ, ಉತ್ಸಾಹ ಮತ್ತು ಸಹಿಷ್ಣುತೆ ಅಭಿವ್ಯಕ್ತವಾಗಲಿ ಎಂದು ಕೋವಿಂದ್ ಹೇಳಿದ್ದಾರೆ.

ಪ್ರಸ್ತುತ ನಾವು ಕೋವಿಡ್ -19 ಸಾಂಕ್ರಾಮಿಕದ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಈ ಸಾಂಕ್ರಾಮಿಕ ರೋಗವನ್ನು ಆದಷ್ಟು ಬೇಗನೆ ಹೋಗಲಾಡಿಸಲು ಗಣೇಶ ಎಲ್ಲರಿಗೂ ಆಶೀರ್ವದಿಸಲಿ ಎಂದು ರಾಮನಾಥ್ ಕೋವಿಂದ್ ಪ್ರಾರ್ಥಿಸಿದ್ದಾರೆ. ಎಲ್ಲರಿಗೂ ಸಂತೋಷದಾಯಕ ಮತ್ತು ಆರೋಗ್ಯಕರ ಜೀವನವನ್ನು ಪ್ರಾಪ್ತಿಯಾಗಲಿ ಎಂದು ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಶನಿವಾರ ಗಣೇಶ ಚತುರ್ಥಿಹಬ್ಬದ ನಿಮಿತ್ತ ಎಲ್ಲೆಡೆ ಸಂತೋಷ ಮತ್ತು ಸಮೃದ್ಧಿಯನ್ನು ಹಾರೈಸಿದ್ದಾರೆ. "ಗಣೇಶ ಚತುರ್ಥಿಯ  ಶುಭಾಶಯಗಳು. ಭಗವಾನ್ ಶ್ರೀ ಗಣೇಶನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ. ಎಲ್ಲೆಡೆ ಸಂತೋಷ ಮತ್ತು ಸಮೃದ್ಧಿ ಇರಲಿ" ಎಂದು ಅವರು ಟ್ವೀಟ್ ಮಾಡಿದ್ದಾರೆ.
 

SCROLL FOR NEXT