ಸಂಗ್ರಹ ಚಿತ್ರ 
ದೇಶ

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ; ಅಧ್ಯಕ್ಷ ಸ್ಥಾನ ತ್ಯಜಿಸಲು ಸೋನಿಯಾ ಒಲವು; ಗರಿಗೆದರಿದ ರಾಜಕೀಯ ಚಟುವಟಿಕೆ

ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಕಾಂಗ್ರೆಸ್ ವಲಯದಲ್ಲೇ ಕೇಳಿ ಬಂದಿರುವ ಅಪಸ್ವರ ಇದೀಗ ಹೊಸದೊಂದು ರಾಜಕೀಯ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದ್ದು, ಈ ನಿಟ್ಟಿನಲ್ಲಿ ನಾಳೆ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕುತೂಹಲ ಕೆರಳಿಸಿದೆ.

ನವದೆಹಲಿ: ಗಾಂಧಿ ಕುಟುಂಬದ ನಾಯಕತ್ವದ ವಿರುದ್ಧ ಕಾಂಗ್ರೆಸ್ ವಲಯದಲ್ಲೇ ಕೇಳಿ ಬಂದಿರುವ ಅಪಸ್ವರ ಇದೀಗ ಹೊಸದೊಂದು ರಾಜಕೀಯ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಿದ್ದು, ಈ ನಿಟ್ಟಿನಲ್ಲಿ ನಾಳೆ ದೆಹಲಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಕುತೂಹಲ ಕೆರಳಿಸಿದೆ.

ಸ್ವಪಕ್ಷೀಯರೇ ಗಾಂಧಿ ಕುಟುಂಬದ ನಾಯಕತ್ವದ ಕುರಿತು ಪ್ರಶ್ನೆ ಮಾಡಿರುವುದು ಸೋನಿಯಾ ಗಾಂಧಿ ಅಸಮಾಧಾನಕ್ಕೆ ಕಾರಣವಾಗಿದ್ದು, ತಾವು ಸ್ಥಾನದಿಂದ ಕೆಳಗಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಪಕ್ಷದ ಹಿರಿಯ ನಾಯಕರು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿರುವ  ಸೋನಿಯಾ ಗಾಂಧಿ, ತಾವು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ. ಪಕ್ಷದ ನಾಯಕರು ಒಟ್ಟಾಗಿ ಹೊಸ ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿಗದಿಯಾಗಿದ್ದು, ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸದಸ್ಯರು, ಹಾಲಿ ಸಂಸದರು, ಹಲವು ಮಾಜಿ ಕೇಂದ್ರ ಸಚಿವರನ್ನೊಳಗೊಂಡ 23 ಹಿರಿಯ ನಾಯಕರು, ಪಕ್ಷದ ಶಕ್ತಿ  ಕಡಿಮೆಯಾಗುತ್ತಿರುವುದರ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ರಾಜ್ಯಸಭಾ ಸದಸ್ಯ ಗುಲಾಮ್ ನಬಿ ಆಜಾದ್, ಮಾಜಿ ಕೇಂದ್ರ ಸಚಿವರಾದ ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ಸಂಸದ ವಿವೇಕ್ ತಂಖಾ, ಎಐಸಿಸಿ ಪದಾಧಿಕಾರಿಗಳು ಮತ್ತು ಸಿಡಬ್ಲ್ಯುಸಿ ಸದಸ್ಯರು ಮುಕುಲ್  ವಾಸ್ನಿಕ್ ಮತ್ತು ಜಿತಿನ್ ಪ್ರಸಾದ ಮತ್ತು ಮಾಜಿ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸಚಿವರಾದ ಭೂಪಿಂದರ್ ಸಿಂಗ್ ಹೂಡಾ, ರಾಜೇಂದರ್ ಕೌರ್ ಭಟ್ಟಲ್, ಎಂ ವೀರಪ್ಪ ಮೊಯಿಲಿ, ಪೃಥ್ವಿರಾಜ್ ಚವಾಣ್, ಪಿ ಜೆ ಕುರಿಯನ್, ಅಜಯ್ ಸಿಂಗ್, ರೇಣುಕಾ ಚೌಧರಿ, ಮತ್ತು ಮಿಲಿಂದ್ ದೌದಾರಿ; ಮಾಜಿ ಪಿಸಿಸಿ  ಮುಖ್ಯಸ್ಥರಾದ ರಾಜ್ ಬಬ್ಬರ್ (ಯುಪಿ), ಅರವಿಂದರ್ ಸಿಂಗ್ ಲವ್ಲಿ (ದೆಹಲಿ) ಮತ್ತು ಕೌಲ್ ಸಿಂಗ್ ಠಾಕೂರ್ (ಹಿಮಾಚಲ್), ಬಿಹಾರ ಅಭಿಯಾನದ ಮುಖ್ಯಸ್ಥ ಅಖಿಲೇಶ್ ಪ್ರಸಾದ್ ಸಿಂಗ್, ಹರಿಯಾಣ ಮಾಜಿ ಸ್ಪೀಕರ್ ಕುಲದೀಪ್ ಶರ್ಮಾ; ದೆಹಲಿಯ ಮಾಜಿ ಸ್ಪೀಕರ್ ಯೋಗಾನಂದ್ ಶಾಸ್ತ್ರಿ ಮತ್ತು ಮಾಜಿ ಸಂಸದ  ಸಂದೀಪ್ ದೀಕ್ಷಿತ್ ಸಹಿ ಮಾಡಿದ್ದಾರೆ.

ಪತ್ರದಲ್ಲಿ ಪಕ್ಷದ ಸಂಪೂರ್ಣ ಬದಲಾವಣೆ, ಶಕ್ತಿಯ ವಿಕೇಂದ್ರೀಕರಣ, ರಾಜ್ಯ ಘಟಕಗಳ ಸಬಲೀಕರಣ, ಎಲ್ಲಾ ಹಂತಗಳಲ್ಲಿ ಕಾಂಗ್ರೆಸ್‌ ಸಂಘಟನೆಗಳಿಗೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಪಕ್ಷದ ನಾಯಕ ಅಶೋಕ್‌ ಗೆಹ್ಲೋಟ್‌ ಮಾತ್ರ ಈ ಪತ್ರ  ಬರೆದಿರುವುದು ದುರದೃಷ್ಟಕರ ಎಂದಿದ್ದು, ಸೋನಿಯಾ ಗಾಂಧಿ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೆಹ್ಲೂಟ್ ಮಾತ್ರವಲ್ಲದೇ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಕೂಡ ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದ್ದು, ಗಾಂಧಿ ಕುಟುಂಬದ ನಾಯಕತ್ವದಿಂದಲೇ ಕಾಂಗ್ರೆಸ್ ಒಗ್ಗಟ್ಟಾಗಿದೆ. ಚುನಾವಣೆಯಲ್ಲಿನ ಸೋಲು ನಾಯಕತ್ವದ ಬದಲಾವಣೆಗೆ ಮಾರ್ಗವಲ್ಲ. ದೇಶವನ್ನು ಜಾತಿಯ ಹಾದಿಯಲ್ಲಿ  ವಿಭಜಿಸುವ ಮಹತ್ವಾಕಾಂಕ್ಷೆ ಮತ್ತು  ಧರ್ಮವನ್ನು ಹೊಂದಿರುವ ಬಿಜೆಪಿ ಹಾದಿಯಲ್ಲಿ ನಿಸ್ವಾರ್ಥ ಬದ್ಧತೆ ಮತ್ತು ಊಹಿಸಲಾಗದ ತ್ಯಾಗಗಳ ಮೂಲಕ ಬಂಡೆಯಂತೆ ನಿಲ್ಲಲು ಅವಕಾಶ ಮಾಡಿಕೊಟ್ಟಿರುವ ಕುಟುಂಬವನ್ನು ದುರ್ಬಲಗೊಳಿಸುವುದು ತಪ್ಪು. ಗಾಂಧಿ ಕುಟುಂಬದ ಕಾಂಗ್ರೆಸ್ ನಾಯಕತ್ವಕ್ಕೆ ಯಾವುದೇ  ಸವಾಲನ್ನು ವಿರೋಧಿಸುತ್ತೇವೆ ಎಂದು  ಹೇಳಿದ್ದಾರೆ.

ಅಂತೆಯೇ ಛತ್ತೀಸ್‌ಗಡ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ ಕೂಡ ಗಾಂಧಿ ಕುಟುಂಬದ ಬೆಂಬಲಕ್ಕೆ ನಿಂತಿದ್ದು, 'ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರತಿ ಸವಾಲಿನಲ್ಲೂ ನಮಗೆ ಭರವಸೆಯ ಕಿರಣ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಕೋಟಿಗಟ್ಟಲೆ ಕಾರ್ಮಿಕರು ಮತ್ತು ಛತ್ತೀಸ್‌ಗಡ ಮತ್ತು ದೇಶದ   ದೇಶವಾಸಿಗಳು ನಿಮ್ಮೊಂದಿಗಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕದ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, 'ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಸತ್ತೆಯನ್ನೇ ನಾಶ ಮಾಡಲು ಹೊರಟಿರುವ ಸಂದರ್ಭದಲ್ಲಿ  ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು‌  ನಾವೆಲ್ಲರೂ ಪ್ರಯತ್ನಿಸಬೇಕೇ ಹೊರತು ದುರ್ಬಲಗೊಳಿಸುವುದಲ್ಲ' ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೂ ಕೂಡ ಈ ಕುರಿತು ಮಾತನಾಡಿದ್ದು, ಕರ್ನಾಟಕ ಕಾಂಗ್ರೆಸ್ ಘಟಕ ಗಾಂಧಿ ಕುಟುಂಬದ ನಾಯಕತ್ವಕ್ಕೆ ಬೆಂಬಲ ನೀಡುತ್ತದೆ. ಬಿಕ್ಕಿಟ್ಟಿನ  ಸಂದರ್ಭದಲ್ಲೂ ಸೋನಿಯಾ ಅವರು ಯಾವುದೇ ರೀತಿಯ ದೃತಿಗೆಡದೆ ಪಕ್ಷವನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ವಿಷಯ ಯಾವುದೇ  ಇರಲಿ ಅದನ್ನು ಪಕ್ಷದೊಳಗೆ ಚರ್ಚಿಸಬೇಕೇ ಹೊರತು ಮಾಧ್ಯಮಗಳ ಮೂಲಕ ಅಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆ ಕಾಂಗ್ರೆಸ್​ನ ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಂಸದರು ಸೇರಿದಂತೆ ಹಲವು ನಾಯಕರು ಪಕ್ಷದ ನಾಯಕತ್ವ ಬದಲಾವಣೆ ಮಾಡುವಂತೆ ಕೋರಿ ಬರೆದ ಪತ್ರ ಪಕ್ಷದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ಇಲ್ಲಿ ನಾಯಕತ್ವ ಬದಲಾವಣೆ ಸಂಬಂಧ  ಮಹತ್ವದ ಮಾತುಕತೆ, ಚರ್ಚೆ ನಡೆಯುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT