ದೇಶ

ವಿದೇಶದಲ್ಲಿ'ನೀಟ್' ಪರೀಕ್ಷಾಕೇಂದ್ರ ಸ್ಥಾಪನೆಗೆ ಆದೇಶಿಸಲು ಸುಪ್ರೀಂ ಕೋರ್ಟ್ ನಕಾರ

Raghavendra Adiga

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ವಿದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿದೇಶದಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ, ಸೆಪ್ಟೆಂಬರ್ 13 ರ ನೀಟ್ ಪರೀಕ್ಷೆಯನ್ನು ಬರೆಯಲು ಆಗಮಿಸುವ ವಿದೇಶದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ವಂದೇ ಭಾರತ್ ಮಿಷನ್ ವಿಮಾನಗಳ ಮೂಲಕ ಭಾರತಕ್ಕೆ ಮರಳುವಂತೆ ನೋಡಿಕೊಳ್ಳಲು ಸಾಧ್ಯವೆ ಎನ್ನುವುದನ್ನು ಸಂಬಂಧಪಟ್ಟ ಸರ್ಕಾರಿ ಸಚಿವಾಲಯಗಳೊಂದಿಗೆ ಸಮಾಲೋಚಿಸಲು ಕೇಳಿದೆ.

"ನೀಟ್ ಪರೀಕ್ಷೆ ಬರೆಯಲು ಭಾರತಕ್ಕೆಆಗಮಿಸುವ ವಿದ್ಯಾರ್ಥಿಗಳಿಗೆ ವಂದೇ ಭಾರತ್ ಮಿಷನ್ ವಿಮಾನಗಳ ಮೂಲಕ ಪ್ರಯಾಣಿಸಲು ಅನುಮತಿ ಸಿಗುವುದನ್ನು  ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಸಚಿವಾಲಯಗಳನ್ನು ಸಂಪರ್ಕಿಸುವಂತೆ ನಾವು ಎಸ್‌ಜಿಯನ್ನು ಕೋರುತ್ತೇವೆ." ಎಲ್ ನಾಗೇಶ್ವರ ರಾವ್, ಹೇಮಂತ್ ಗುಪ್ತ ಮತ್ತು ಎಸ್ ರವೀಂದ್ರ ಭಟ್ ಅವರ ನ್ಯಾಯಪೀಠವು ಹೇಳಿದೆ.

ಮಧ್ಯಪ್ರಾಚ್ಯದ ವಿದ್ಯಾರ್ಥಿಗಳು ವಂದೇ ಭಾರತ್ ಮಿಷನ್ ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲು ಅನುಮತಿ ಇದೆ ಎಂದು ಖಚಿತಪಡಿಸಿಕೊಳ್ಳಲು ಸಂಬಂಧಪಟ್ಟ ಸಚಿವಾಲಯಗಳೊಂದಿಗೆ ಮಾತನಾಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ. ಹೇಳಿದ್ದಾರೆ.  ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ 14 ದಿನಗಳ ಕೋವಿಡ್ ಕ್ವಾರಂಟೈನ್ ಅನ್ನು ಅಂತಹಾ ವಿದ್ಯಾರ್ಥಿಗಳು ಅನುಸರಿಸಿದ್ದಾರೆ ಎನ್ನುವುದನ್ನೂ ಖಚಿತಪಡಿಸಿಕೊಳ್ಲಬೇಕು. ಆದರೆ ವಿದ್ಯಾರ್ಥಿಗಳಿಗೆ ಕ್ಯಾರೆಂಟೈನ್ ಅವಧಿಯನ್ನು ಸಡಿಲಿಸುವಂತೆ ಕೋರಿ ಅರ್ಜಿದಾರರಿಗೆ ಸಂಬಂಧಪಟ್ಟ ರಾಜ್ಯ ಸರ್ಕಾರವನ್ನು ಸಂಪರ್ಕಿಸಲು ಅನುಮತಿ ಇದೆ.

SCROLL FOR NEXT