ದೇಶ

ಮಾನವ ಕಂಪ್ಯೂಟರ್ ಶಕುಂತಲಾದೇವಿ ದಾಖಲೆ ಮುರಿದ ಹೈದರಾಬಾದ್ ಯುವಕನಿಗೆ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಪ್ರಶಸ್ತಿ!

Raghavendra Adiga

ನವದೆಹಲಿ: ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ (ಎಂಎಸ್‌ಒ) ಯಲ್ಲಿ ನಡೆದ ಮೆಂಟಲ್ ಕೌಂಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದ ನಂತರ ಹೈದರಾಬಾದ್‌ನ ಇಪ್ಪತ್ತು ವರ್ಷದ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಆಗಿ ಹೊರಹೊಮ್ಮಿದ್ದಾರೆ.

ದೆಹಲಿ ವಿಶ್ವವಿದ್ಯಾನಿಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನ ಗಣಿತ ವಿದ್ಯಾರ್ಥಿ ನೀಲಕಂತ್ ಭಾನು ಪ್ರಕಾಶ್ ಅವರು ವಿಶ್ವ ದಾಖಲೆಯೊಂದಿಗೆ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾರತವನ್ನು ಜಾಗತಿಕ ಮಟ್ಟದಲ್ಲಿ ಗಣಿತದಲ್ಲಿಮುಂಚೂಣಿಯಲ್ಲಿರಿಸಲು ನಾನು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ ಎಂದು  ಭಾನು ಪ್ರಕಾಶ್ಎಎನ್‌ಐಗೆ ತಿಳಿಸಿದರು.ಅವರು ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕುಲೇಟರ್ ಎಂದು ಖ್ಯಾತವಾಗಲು ಅವರು  4 ವಿಶ್ವ ದಾಖಲೆಗಳನ್ನು ಮತ್ತು 50 ಲಿಮ್ಕಾ ದಾಖಲೆಗಳನ್ನು ಹೊಂದಿದ್ದಾರೆ. "ನನ್ನ ಮೆದುಳು ಕ್ಯಾಲ್ಕುಲೇಟರ್ ವೇಗಕ್ಕಿಂತ ವೇಗವಾಗಿ ಲೆಕ್ಕಾಚಾರ ಮಾಡುತ್ತದೆ. ಈ ದಾಖಲೆಗಳನ್ನು  ಮುರಿಯುವ ಶಕ್ತಿ ಮಾನವ ಕಂಪ್ಯೂಟರ್  ಎಂದೇ ಖ್ಯಾತವಾದ  ಶಕುಂತಲಾ ದೇವಿ ಅವರ ಬಳಿ ಇದ್ದಿತು.

ಯುಕೆ, ಜರ್ಮನಿ, ಯುಎಇ, ಫ್ರಾನ್ಸ್ ಗ್ರೀಸ್ ಮತ್ತು ಲೆಬನಾನ್ ಸೇರಿದಂತೆ 13 ದೇಶಗಳಿಂದ 57 ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಬಾನು ಪ್ರಕಾಶ್ ಗೆಲುವು ಸಾಧಿಸಿದ್ದಾರೆ. 1998 ರಲ್ಲಿ ಈ ಸ್ಪರ್ಧೆ ಮೊದಲ ಬಾರಿಗೆ ಆಯೋಜಿಸಲ್ಪಟ್ಟಿತ್ತು.

"ಯಾವುದೇ ದೇಶವು ಜಾಗತಿಕವಾಗಿ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು, ಸಾಕ್ಷರತೆಯು ಕೌಶಲ್ಯದಷ್ಟೇ ಸಂಖ್ಯಾಶಾಸ್ತ್ರವೂ ಮುಖ್ಯವಾಗಿದೆ. ಸರ್ಕಾರದ ಪಟ್ಟಿಮಾಡಿದ ಗುರಿಗಳ ಅಡಿಯಲ್ಲಿ, ಹೆಚ್ಚುತ್ತಿರುವ ಸಾಕ್ಷರತೆಗೆ ಒತ್ತು ನೀಡುವ ಹಲವಾರು ಕಾರ್ಯಕ್ರಮಗಳಿವೆ, ಆದರೆ ಇಲ್ಲಿಯವರೆಗೆ ಯಾವುದೇ ಮಹತ್ವದ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬಂದಿಲ್ಲ. ಗಣಿತದ ಸಾಮರ್ಥ್ಯಗಳು ಮತ್ತು ಸಂಖ್ಯಾಶಾಸ್ತ್ರದ ಪ್ರಚಾರ ಹೆಚ್ಚಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ನಮ್ಮನ್ನು ಮುಂದಿರಿಸಬಹುದು.ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ನಿರ್ಧರಿಸಬೇಕು. "

"ಮೆಂಟಲ್ ಮ್ಯಾತ್ಸ್ ಹಾಗೂ  ಮೈಂಡ್ ಗೇಮ್ ಗಳಲ್ಲಿ  ಒಲಿಂಪಿಕ್ ಚಿನ್ನದ ಪದಕದ ವಿಜಯವನ್ನು ಕೇಂದ್ರ ಸರ್ಕಾರವು ಗುರುತಿಸಬೇಕು, ಏಕೆಂದರೆ ಇದು ದೇಶದಲ್ಲಿ ಲಾರೆಲ್ ಬಾಕ್ಸಿಂಗ್ ಅಥವಾ ಬ್ಯಾಡ್ಮಿಂಟನ್ ನಂತಹ ದೈಹಿಕ ಕ್ರೀಡೆಗಳಲ್ಲಿ ಚಿನ್ನದ ಪದಕ ಗೆಲ್ಲುವಷ್ಟೇ ಮುಖ್ಯವಾಗಿದೆ. ಇದು ಸರಿಯಾದ ಸಮಯವೆಂದು ನಾನು ಭಾವಿಸಿದ್ದೇನೆ. ಅದಾನಿ ಫೌಂಡೇಶನ್‌ನ  ಸಹಯೀಗದೊಡನೆ ಗಣಿತ ಶಿಕ್ಷಣ ಮಕ್ಕಳಿಗೆ ನೀಡುವದರೊಡನೆ ಭಾರತವನ್ನು ಜಾಗತಿಕ ಶ್ರೇಷ್ಠತೆಯ ಮಟ್ಟಕ್ಕೆ ಏರಿಸುತ್ತದೆ. " ಭಾನು ಪ್ರಕಾಶ್ ಹೇಳಿದ್ದಾರೆ.

SCROLL FOR NEXT